ಕಲಬುರಗಿ :- ಜಿಲ್ಲೆ ಅಫಜಲಪುರ ತಾಲೂಕಿನ ಪುಣ್ಯ ಕ್ಷೇತ್ರ ಗಾಣಗಾಪುರದಲ್ಲಿಂದು ಶ್ರೀ ಗುರುದತ್ತನ ಸನ್ನಿಧಿಯಲ್ಲಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಪ್ರತಿ ವರ್ಷದ ಸಂಪ್ರದಾಯದಂತೆ ಕಾರ್ತಿಕ ಮಾಸದಲ್ಲಿ ಬರುವ ಗೌರಿ ಹುಣ್ಣಿಮೆಯಂದು ಉತ್ಸವ ನಡೆಯುತ್ತೆ..
ಆಂಧ್ರ ತೆಲಂಗಾಣ ಮಹಾರಾಷ್ಟ್ರ ಸೇರಿದಂತೆ ಇತರೇ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಬರ್ತಾರೆ..ಪಲ್ಲಕ್ಕಿ ಉತ್ಸವದ ನಂತ್ರ ಮಧ್ಯಾನ ಸಂಗಮ ನದಿ ತೀರದಲ್ಲಿ ಸಾವಿರಾರು ಭಕ್ತರು ಸೇರಿ ಬುತ್ತಿ ಊಟ ಮಾಡುವುದು ಉತ್ಸವದ ಮತ್ತೊಂದು ವಿಶೇಷ..