ಮೈಸೂರು:- ವಿದ್ಯಾರ್ಥಿ ನಿಲಯಗಳಲ್ಲಿ ಅಡುಗೆ ಮಾಡುವವರಿಗೆ ಉತ್ತಮ ರೀತಿಯಲ್ಲಿ ಆಹಾರ ತಯಾರಿಸುವ ತರಬೇತಿಯನ್ನು ನೀಡಿರಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಲು ಅಗತ್ಯ ಕ್ರಮ ವಹಿಸಬೇಕು. ಮತ್ತು ಏಪ್ರೋನ್ಗಳನ್ನು ಧರಿಸಿ ಅಡುಗೆಯನ್ನು ತಯಾರಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ ಅವರು ತಿಳಿಸಿದರು.
ಕರ್ನಾಟಕ ಮುಕ್ತ ಗಂಗೋತ್ರಿಯಲ್ಲಿನ ಆಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ನಿಗಮ/ಮಂಡಳಿ ಹಾಗೂ ಆಯೋಗಗಳಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳ ಕುರಿತು ಮೈಸೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಎಂದರೆ ಬರಿ ಸ್ಕಾಲರ್ಶಿಪ್,
NPCI guidelines: ಒಂದು ವರ್ಷದಿಂದ ಯಾವುದೇ ವಹಿವಾಟು ನಡೆಸದ ಯುಪಿಐ ಐಡಿ, ಯುಪಿಐ ನಂಬರ್ ಡೀ ಆ್ಯಕ್ಟಿವೇಟ್: ಕಾರಣ!
ಉಚಿತ ಊಟ, ಬಟ್ಟೆ ನೀಡುತ್ತಾರೆ ಅನ್ನುವುದಕ್ಕಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿ ಮುಂದೆ ಅವರ ಭವಿಷ್ಯದಲ್ಲಿ ಏನು ಮಾಡಬೇಕು ಹಾಗೂ ಅವರು ಎಲ್ಲ ಸಮಾನತೆ ಮತ್ತು ಗೌರವ ದೊಂದಿಗೆ ಜೀವನ ನಡೆಸುವ ಉದ್ದೇಶಕ್ಕಾಗಿ ನಮ್ಮ ಇಲಾಖೆ ಇರುವುದು. ಅದೇ ರೀತಿ ಅವರಲ್ಲಿ ಯಾವ ರೀತಿಯ ಬದಲಾವಣೆ ಉಂಟಾಗಿದೆ ಎಂಬ ಮಾಹಿತಿಯನ್ನು ಫಾಲೋಅಪ್ ಮಾಡಿ ತಿಳಿದುಕೊಂಡಿರಬೇಕು ಎಂಬುದು ಈ ಯೋಜನೆಗಳ ಮುಖ್ಯ ಉದ್ದೇಶ ಎಂದು ತಿಳಿಸಿದರು.