ಬೀದರ್: ಉಡಬಾಳದ ಶ್ರೀ ರೇಣುಕಾ ಯಲ್ಲಮ್ಮ ತಾಯಿಯ ಪವಾಡಗಳನ್ನು ನಾನು ಕೂಡ ಕಂಡಿದ್ದೇನೆ. ತಾಯಿಯ ಪವಾಡಗಳು ಬಹಳಷ್ಟು ಇವೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಡಬಾಳ ಗ್ರಾಮದಲ್ಲಿ ನಡೆದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಗೋಪೂರ ಉದ್ಘಾಟನಾ ಹಾಗೂ ಕಳಸಾರೋಹಣ ಮತ್ತು ಲಕ್ಷ ದಿಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೇಣುಕಾ ಯಲ್ಲಮ್ಮ ದೇವಿಯ ಪವಾಡಗಳ ಬಗ್ಗೆ ತಿಳಿಸಿದರು.2013ರ ಫೆಬ್ರುವರಿ ತಿಂಗಳಲ್ಲಿ ತಾಯಿಯ ಜಾತ್ರೆ ಇತ್ತು. ಕ್ಷೇತ್ರದ ಶಾಸಕನಾಗಿ ನಾನು ಜಾತ್ರೆಯಲ್ಲಿ ಪಾಲ್ಗೊಂಡಿದ್ದೆ. ಅಂದು ತಾಯಿಯ ಗೋಪೂರ ಕಟ್ಟಿಸಬೇಕೆಂದು ಗ್ರಾಮಸ್ಥರು ಹೇಳಿದ್ದರು. ಆಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜಕಾರಣಿಯೊಬ್ಬರು ಗೋಪೂರ ನಾನು ಕಟ್ಟಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು.
NPCI guidelines: ಒಂದು ವರ್ಷದಿಂದ ಯಾವುದೇ ವಹಿವಾಟು ನಡೆಸದ ಯುಪಿಐ ಐಡಿ, ಯುಪಿಐ ನಂಬರ್ ಡೀ ಆ್ಯಕ್ಟಿವೇಟ್: ಕಾರಣ!
ಮೂರು ತಿಂಗಳ ಬಳಿಕ ನಡೆದ ಚುನಾವಣೆಯಲ್ಲಿ ಗೋಪೂರ ಕಟ್ಟಿಸಿಕೊಡುವ ಭರವಸೆ ನೀಡಿದ್ದ ರಾಜಕಾರಣಿಯೇ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ 2013 ರಿಂದ 2018ರವರೆಗೆ ಐದು ವರ್ಷ ಕಳೆದರು ಗೋಪೂರ ಕಟ್ಟಿಸಿಕೊಡಲಿಲ್ಲ. ಗೋಪುರಕ್ಕೆ ಅನುದಾನವೂ ಕೊಡಲಿಲ್ಲ. ದೇವಸ್ಥಾನದ ಗೋಪೂರದ ಕೆಲಸ ಹಾಗೆಯೇ ಉಳಿದಿತ್ತು. ಬಳಿಕ ನಡೆದ ಚುನಾವಣೆಯಲ್ಲಿ ನಾನು ಗೆದ್ದು ಶಾಸಕನಾದೆ, ಮಂತ್ರಿಯೂ ಆದೆ. ಆಗ ಗ್ರಾಮಸ್ಥರ ಮತ್ತು ಅನೇಕರ ಸಹಕಾರದಿಂದ ದೇವಸ್ಥಾನ ಗೋಪೂರದ ಕೆಲಸ ಶುರು ಮಾಡಿದ್ದೇವು. ತಾಯಿಯ ಪವಾಡದಿಂದ ಒಂದೇ ವರ್ಷದಲ್ಲೇ ಗೋಪೂರದ ಕೆಲಸ ನಡೆದಿತ್ತು. ಶಾಸಕರ ಅನುದಾನದಲ್ಲಿ 10 ಲಕ್ಷ ರೂ. ದೇವಸ್ಥಾನದ ಆವರಣದಲ್ಲಿನ ಕಟ್ಟಡಕ್ಕೆ ಆಗ ನೀಡಿದ್ದೆ.
ನಾನು ಇವತ್ತು ರೇಣುಕಾ ಯಲ್ಲಮ್ಮ ತಾಯಿಯ ಕಳಸಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡು ಇಲ್ಲಿಗೆ ಬಂದೆ. ಸರಿಯಾದ ಸಮಯಕ್ಕೆ ತಾಯಿಯ ಕಳಸಾರೋಹಣ ದರ್ಶನದ ಭಾಗ್ಯ ನನಗೆ ಸಿಕ್ಕಿತು. ನಾಲ್ಕೈದು ನಿಮಿಷ ತಡವಾಗಿದ್ದರು ಕೂಡ ಕಳಸಾರೋಹಣ ಕಾರ್ಯಕ್ರಮ ಮುಗಿದು ಹೋಗುತ್ತಿತ್ತು. ಇದು ಕೂಡ ಒಂದು ಪವಾಡವಾಗಿದೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ವೇದಿಕೆ ಕಾರ್ಯಕ್ರಮದ ಆರಂಭಕ್ಕೂ ಮುನ್ನ ಅವರು, ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಕಳಸಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತಾಯಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ವಿವಿಧ ಪುಣ್ಯಕ್ಷೇತ್ರಗಳ ಪೂಜ್ಯರು, ದೇವಸ್ಥಾನದ ಪಂಚ ಕಮಿಟಿಯ ಸದಸ್ಯರು, ಮುಖಂಡರು, ಗ್ರಾಮಸ್ಥರು ಸೇರಿದಂತೆ ಅನೇಕರಿದ್ದರು.