ಮೊದಲ ದಿನದಿಂದಲೂ ಕಾರ್ತಿಕ್ ಮತ್ತು ತನಿಷಾ ಜೊತೆ ಹೆಚ್ಚು ಆತ್ಮೀರಾಗಿದ್ದ ಸಂಗೀತ ಈ ವಾರ ಪೂರ್ತಿ ವಿನಯ್ ತಂಡದಲ್ಲೇ ಕಾಣಿಸಿಕೊಂಡರು.
ಅಲ್ಲದೇ, ಟಾಸ್ಕ್ ಹೆಸರಲ್ಲಿ ಇವರು ತೋರಿದ ವರ್ತನೆ ನೋಡುಗರಿಗೆ ಸೇಡು ತೀರಿಸಿಕೊಳ್ಳುವಂತೆ ಕಾಣುತ್ತಿತ್ತು. ಗಾರ್ಡನ್ ಏರಿಯಾದಲ್ಲಿ ಮಾತನಾಡುವಾಗ ನಮ್ರತಾ ಮುಂದೆ ಅವರ ಜೊತೆ ಇದ್ದದ್ದು ಜಸ್ಟ್ ಟೈಂಪಾಸ್ ಎಂದಿದ್ದಾರೆ.
ನಿನ್ನೆ ನಡೆದ ಕಿಚ್ಚ ಪಂಚಾಯ್ತಿಯಲ್ಲಿ ಸುದೀಪ್ ಈ ವಿಚಾರವನ್ನು ಸಹ ಮಾತನಾಡಿದ್ದಾರೆ. ಸಂಗೀತಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಆರು ವಾರ ಕಾರ್ತಿಕ್ ತಂಡದ ಜೊತೆಗೆ ಇದ್ದವರು ಈಗ ವಿನಯ್ ಟೀಂ ಸೇರಿದ್ದೀರಿ. ಎರಡು ತಂಡದಲ್ಲಿ ಏನೆಲ್ಲ ಚೇಂಜಸ್ ಇದೆ ಎಂದು ಸುದೀಪ್ ಕೇಳಿದ್ದಾರೆ.
ಈ ಟೀಮ್ಗೆ ಬಂದಮೇಲೆ ವಿನಯ್ ನನಗೆ ವೆರಿ ಕೇರಿಂಗ್ ಹಾಗೂ ಕಾಮ್ ಎನಿಸಿದರು. ಕಾರ್ತಿಕ್ ಯಾವಾಗಲೂ ನನ್ನ ಬಳಿ ಮಾತನಾಡುವಾಗ ಸಂಗೀತ ಜಗಳಕ್ಕೆ ಬರುತ್ತಾಳೆ ಎಂದೇ ಹೇಳ್ತಿದ್ರು. ವಿನಯ್ ತುಂಬಾ ಮೆಚ್ಯೂರ್ಡ್. ಆದರೆ ಆ ಮೆಚ್ಯೂರಿಟಿ ಕಾರ್ತಿಕ್ ಟೀಮ್ನಲ್ಲಿ ನನಗೆ ಕಾಣಿಸಿಲ್ಲ ಎಂದಿದ್ದಾರೆ.
ಇಷ್ಟೆಲ್ಲ ಮಾತನಾಡಿದ್ದನ್ನು ಕೇಳಿದ ತನಿಷಾ, ಅವರು ಯಾವ ಟೀಮ್ನಲ್ಲಿ ಇರುತ್ತಾರೆ ಅಲ್ಲಿ ಅವರಿಗೆ ತುಂಬಾ ಪ್ರೀತಿ ಬರುತ್ತೆ. ಈಗ ವಿನಯ್ ಟೀಮ್ಗೆ ಹೋಗಿದ್ದಕ್ಕೆ ನಾವು ಬೇರೆ ರೀತಿ ಕಾಣುತ್ತಾ ಇದ್ದೇವೆ. ಎದುರಾಳಿ ತಂಡ ಅವರ ಕಣ್ಣಿಗೆ ಯಾವಾಗಲು ಕಡಿಮೆಯಾಗಿಯೇ ಕಾಣೋದು ಎಂದು ಟಾಂಗ್ ಕೊಟ್ಟಿದ್ದಾರೆ.
ಇದೇ ವೇಳೆ ಬಾಯಿ ತೆಗೆದರೆ ಫ್ರೆಂಡ್ಶಿಪ್ ಎನ್ನುವ ಸಂಗೀತ ಗೆ ಕಿಚ್ಚ ಸುದೀಪ್ ಸಖತ್ ಪ್ರಶ್ನೆಯೊಂದನ್ನ ಕೇಳಿದ್ದಾರೆ. ಸಂಗೀತ ಕೊಟ್ಟ ಟಾಸ್ಕ್ ಬಗ್ಗೆ ಕಿಚ್ಚ ಪ್ರಶ್ನಿಸಿದ್ದಾರೆ. ಅಷ್ಟು ದಿನ ಫ್ರೆಂಡ್ ಆಗಿದ್ದವರ ಹೆಡ್ ಶೇವ್ ಮಾಡಬೇಕು ಎಂದು ಹೇಳಿದ್ರಲ್ಲ, ಹಾಗಾದ್ರೆ ಅವರು ನಿಮಗೆ ಫ್ರೆಂಡ್ ಅಲ್ವಾ? ಆಗ ನಿಮಗೆ ಏನು ಅನ್ನಿಸಲಿಲ್ವ ಎಂದು ಸುದೀಪ್ ಕೇಳಿದ್ದಾರೆ
6 ವಾರದಲ್ಲಿ ಯಾವ ಬದಲಾವಣೆ ಕಾಣದೆ ಇದ್ದದ್ದು, ವಿನಯ್ ತಂಡಕ್ಕೆ ಹೋದ ಒಂದೇ ರಾತ್ರಿಯಲ್ಲಿ ಕಂಡು ಬಿಟ್ಟಿತಾ? ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ