ಬೆಂಗಳೂರು:- ಮೋದಿ ನಮ್ಮ ಎಚ್ಎಎಲ್ ಮಾರಬೇಡಿ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಕೇವಲ ಫೋಟೋಶೂಟ್ ಮಾಡಿಸಿಕೊಳ್ಳಲು ಬಂದಿದ್ದೀರೋ ಅಥವಾ ಅದಾನಿಯ ಏಜೆಂಟ್ ಆಗಿ ಬಂದಿದ್ದೀರೋ ಗೊತ್ತಿಲ್ಲ. ಆದರೆ ನಮ್ಮ ಎಚ್ಎಎಲ್ ನಮಗೆ ಬಿಡಿ, ನಮ್ಮ ಹೆಮ್ಮೆಯ ಸಂಸ್ಥೆಯನ್ನು ಮಾರಬೇಡಿ’ ಎಂದು ಮನವಿ ಮಾಡಿದೆ.
ಜತೆಗೆ ‘ಎಚ್ಎಎಲ್ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ಮೋದಿ ಅವರೇ, ಇದೇ ಎಚ್ಎಎಲ್ನೊಂದಿಗೆ ಮಾಡಿಕೊಂಡಿದ್ದ ರಫೆಲ್ ಒಪ್ಪಂದವನ್ನು ರದ್ದುಪಡಿಸಿ ಅಂಬಾನಿ ಜೋಳಿಗೆ ತುಂಬಿಸಿದ್ದೇಕೆ? ಎಚ್ಎಎಲ್ಗೆ ದ್ರೋಹವೆಸಗಿ ಈಗ ಫೋಟೋಶೂಟ್ ಮಾಡಿಸಿಕೊಳ್ಳುವುದಕ್ಕೆ ನಿಮ್ಮ ಮನಸು ಒಪ್ಪಿದ್ದು ಹೇಗೆ?’ ಎಂದು ಲೇವಡಿ ಮಾಡಿದೆ.