ಕಲಬುರಗಿ:- ಜಿಲ್ಲೆಯ ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಕಾರ್ತೀಕ ಮಾಸದ ಪ್ರಯುಕ್ತ ದೀಪೋತ್ಸವ ಅರ್ಚಕರಾದ ಗುಂಡಾಚಾರ್ಯ ಜೋಶಿ ನರಿಬೊಳ ಅವರ ನೇತೃತ್ವದಲ್ಲಿ ನೆರವೇರಿತು.
ಕಾರ್ತೀಕ ಮಾಸದ ಪ್ರಯುಕ್ತ ಪ್ರತಿದಿನವೂ ಸಂಜೆ ದೀಪೋತ್ಸವ, ಭಜನೆ, ಶ್ರೀ ರಾಮತಾರಕ ಮಂತ್ರ ಜಪ, ಮಾಹಾಮಂಗಳಾರತಿ, ಮಂತ್ರಪುಷ್ಪ ನೆರವೇರುತ್ತಿದೆ, ಡಿಸೆಂಬರ್ 12 ರವರೆಗೂ ದೀಪೋತ್ಸವ ನಡೆಯಲಿದೆ ಎಂದು ಅರ್ಚಕರು ತಿಳಿಸಿದರು.
ಜಯತೀರ್ಥ ಮಹಿಳಾ ಮಂಡಳಿಯ ಸದಸ್ಯರು, ಗೋಪಾಲರಾವ, ಶಾಮರಾವ ಕುಲಕರ್ಣಿ, ಪ್ರಮೋದ ಪಂಥ, ಗುರುರಾಜ, ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.