ಬೆಂಗಳೂರು:– ಚುನಾವಣೆಯಲ್ಲಿ ಸೋತು ಸೋಮಣ್ಣ ಮಾನಸಿಕವಾಗಿ ನೊಂದಿದ್ದಾರೆ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ವಿಧಾನಸಭೆ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧಿಸಿ ಸೋಲನುಭವಿಸಿದ್ದಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಮಾನಸಿಕವಾಗಿ ನೊಂದಿರುವ ಹಿನ್ನೆಲೆಯಲ್ಲಿ ಬೇಸರದ ಮಾತುಗಳನ್ನಾಡಿದ್ದಾರೆ ಎಂದರು.
ಸೋಮಣ್ಣ ತಮ್ಮ ಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಹೀಗಾಗಿ ಅಸಮಾಧಾನದ ಮಾತುಗಳನ್ನಾಡಿದ್ದಾರೆ. ಅವರ ಮಾತನ್ನು ಒಪ್ಪುತ್ತೇನೆ. ಪಕ್ಷಕ್ಕಾಗಿ ದುಡಿದಿದ್ದಾರೆ. ಸೋಲಾಗಿರುವುದಕ್ಕೆ ಅವರಿಗೆ ನೋವಾಗಿದೆ. ಒಳ್ಳೆಯ ರಾಜಕಾರಣಿಯಾಗಿ ಕೆಲಸ ನಿರ್ವಹಿಸಿದರು. ಸ್ವಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗಿ ಸೋಲನುಭವಿಸಿದ್ದಕ್ಕೆ ನೋವು ತಂದಿದೆ ಎಂದರು.
ಗೋವಿಂದರಾಜನಗರದಲ್ಲಿ ಸ್ಪರ್ಧಿಸಿದ್ದರೆ ಖಂಡಿತವಾಗಿಯೂ ಭಾರಿ ಅಂತರದಲ್ಲಿ ಗೆಲುವು ಸಾಧಿಸುತ್ತಿದ್ದರು. ಪಕ್ಷವು ತೀರ್ಮಾನಿಸಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ನೀಡಿತ್ತು. ಸೋಮಣ್ಣ ಅವರನ್ನು ಕೇಳಿಯೇ ಕಣಕ್ಕಿಳಿಸಲಾಗಿತ್ತು ಎಂದು ಹೇಳಿದರು.