ಆರನೇ ವಾರದ ಕೊನೆಯಲ್ಲಿ ನಡೆದ ಡಬಲ್ ಎಲಿಮಿನೇಷನ್ನಡಿ ಭಾಗ್ಯಶ್ರೀ ಮತ್ತು ಇಶಾನಿ ಮನೆಯಿಂದ ಹೊರಬಂದರು. ಬಿಗ್ ಮನೆಯಿಂದ ಔಟ್ ಆಗಿ ಬಂದ ಇಶಾನಿ ಕೆಲವು ಕುತೂಹಲಕಾರಿ ಸಂಗತಿಗಳನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ.
ಮೊದಲಿಗೆ ಬಿಗ್ ಬಾಸ್ ಮನೆಯಲ್ಲಿ ಉಳಿಯಲು ನನಗೊಂದು ಚಾನ್ಸ್ ಕೊಡಬೇಕಿತ್ತು ಎಂದ ಇಶಾನಿ, ‘ಹೊರಬಂದ ಮೇಲೆ ಜನರು ಖುದ್ದಾಗಿ ನನಗೆ ಹೇಳುತ್ತಿದ್ದಾರೆ, ನಾನು ಇನ್ನೂ ಹೆಚ್ಚಿನ ಸಮಯ ಅಲ್ಲಿ ಇರಬೇಕಿತ್ತು, ಹಠ ತೋರಿಸಬೇಕಿತ್ತು. ಟಾಸ್ಕ್ ಮೇಲೆ ಹೆಚ್ಚು ಫೋಕಸ್ ಮಾಡಬೇಕಿತ್ತು, ರ್ಯಾಪ್ ಹಾಡುಗಳನ್ನು ಹಾಡಬೇಕಿತ್ತು ಎಂದು ಅಭಿಪ್ರಾಯಿಸಿದ್ದಾರೆ’ ಎಂದು ಹೇಳಿದರು.
ಇನ್ನು ಬಿಗ್ ಬಾಸ್ ಮನೆಯಲ್ಲಿ ನಿಮಗೆ ಕೊಟ್ಟ ಸಂಭಾವನೆ ಎಷ್ಟು ಎಂದು ಕೇಳಿದ್ದಕ್ಕೆ ಉತ್ತರಿಸಿದ ಇಶಾನಿ, ‘ಅದರ ಬಗ್ಗೆ ನಾನು ಏನೂ ಹೇಳಲ್ಲಪ್ಪ! ಅದಕ್ಕೆ ಎಲ್ಲೋ ಗೋಚಪ್ಪ ನಿನ್ನ ಅರಮನೆ ಅಷ್ಟೇ’ ಎಂದು ಹೇಳಿದರು. ಒಟ್ಟಾರೆ ಉತ್ತಮ ಪೇಮೆಂಟ್ ಬಂದಿರುವುದು ನಿಜ ಎಂಬುದನ್ನು ಖಚಿತಪಡಿಸಿದರು.