ವಿಜಯಪುರ:- ಕರ್ನಾಟಕದ ಹಿಂದೂಗಳು ಒಗ್ಗಟ್ಟಾಗುವಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕರೆ ನೀಡಿದರು.
ಈ ಸಂಬಂಧ ವಿಜಯಪುರದಲ್ಲಿ ಮಾತನಾಡಿದ ಅವರು, ವಿಜಯಪುರದಲ್ಲಿ ಹಿಂದೂಗಳ ಒಗ್ಗಟ್ಟಾಗಿದ್ದಾರೆ. ಅದೇ ತರ ಸಮಸ್ತ ಕರ್ನಾಟಕದ ಹಿಂದೂಗಳು ಒಗ್ಗಟ್ಟಾಗುವಂತೆ ಕರೆ ನೀಡಿದರು.
ಪಾಕಿಸ್ತಾನ ಭಾರತದ ಮೇಲೆ ಯುದ್ಧ ಮಾಡಿದ್ರೆ ಪಾಕಿಸ್ತಾನಕ್ಕೆ ಬೆಂಬಲ ನೀಡುವಂತೆ ಓವೈಸಿ ಭಾಷಣ ಮಾಡ್ತಾರೆ. 15 ನಿಮಿಷ ಪೊಲೀಸರು ಸುಮ್ನಿದ್ರೆ ಹಿಂದೂಗಳನ್ನು ಖತಮ್ ಮಾಡುತ್ತೇವೆ ಎಂದು ಭಾಷಣ ಮಾಡಿದ್ದಾರೆ. ಮುಂದೆ ಸಂದರ್ಭ ಬಂದರೆ ಅದರಂತೆ ಮಾಡ್ತಾರೆ. ಅದಕ್ಕಾಗಿ ಸಮಸ್ತ ಹಿಂದೂಗಳು ಒಗ್ಗಟ್ಟಾಗಿರಬೇಕು. ವಿಜಯಪುರದಲ್ಲಿ ಹಿಂದೂಗಳು ಒಗ್ಗಟ್ಟಾಗಿದ್ದಾರೆ. ಅದರಂತೆ ಕರ್ನಾಟಕದಲ್ಲೂ ಒಗ್ಗಟ್ಟಾಗುವಂತೆ ಕರೆ ನೀಡಿದರು.
ಇನ್ನು ಕಾಂಗ್ರೆಸ್ ಗ್ಯಾರಂಟಿ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಯತ್ನಾಳ್, ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಸ್ಕೀಂಗಳು ಬೋಗಸ್ ಸ್ಕೀಂಗಳು ಎಂದು ಲೇವಡಿ ಮಾಡಿದರು ಮುಂದುವರಿದು, ಪ್ರತಿ ಕುಟುಂಬಕ್ಕೂ 200 ಯುನಿಟ್ ವಿದ್ಯುತ್ ಕೊಡುತ್ತೇವೆ ಎಂದು ಹೇಳಿದ್ದ್ರು. ಆದರೆ ಇದರಿಂದ ಜನತೆಗೆ ಅನುಕೂಲ ಆಗುವ ಬದಲು ಸಮಸ್ಯೆಯೇ ಆಗಿದೆ. ಚುನಾವಣೆಗೆ ಮೊದಲು ಪ್ರತಿಕುಟುಂಬಕ್ಕೆ ಹತ್ತು ಕೆಜಿ ಅಕ್ಕಿ ನೀಡುತ್ತೇವೆ ಎಂದಿದ್ದರು ಆದರೆ ಇದುವರೆಗೆ ಅಕ್ಕಿ ನೀಡಿಲ್ಲ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ನೇರವಾಗಿ 5ಕೆಜಿ ನೀಡುತ್ತಿದ್ದಾರೆ. ಅದನ್ನೇ ಇವರು ಅನ್ನಭಾಗ್ಯ ಅಂತಾ ತಮ್ಮ ಹೆಸರು ಹೇಳಿಕೊಂಡು ತಿರುಗುತ್ತಿದ್ದಾರೆ. ಈ ಸರ್ಕಾರದಿಂದ ಬಡವರಿಗೆ ಯಾವುದೇ ರೀತಿಯ ಪ್ರಯೋಜನ ಇಲ್ಲ ಎಂದರು.