ಬೆಂಗಳೂರಿನಲ್ಲಿ ಕಂಬಳ ಮಾಡುವುದು ನಮ್ಮ ಕನಸು ಇಂದು ನನಸಾಗ್ತಿದೆ. ಬೆಂಗಳೂರು ಕಂಬಳ ನಮ್ಮ ಕಂಬಳ ಅಲ್ಲ, ಇದು ನಿಮ್ಮ ಕಂಬಳ ಎಂದು ಬೆಂಗಳೂರಿನಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ರೈ ಹೇಳಿದರು. ಕೋಣಗಳನ್ನ ಬೆಂಗಳೂರಿಗೆ ತರುವಾಗ ಹೆಚ್ಚಿನ ಜನರು ಸಹಕರಿಸಿದ್ದಾರೆ. ಕಾಂತಾರ ಸಿನಿಮಾ ಮೂಲಕ ಕಂಬಳ ದೇಶದೆಲ್ಲೆಡೆ ಪರಿಚಯವಾಗಿದೆ. ಇನ್ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಬಳವನ್ನ ಗುರುತಿಸುತ್ತೇವೆ. ವಿವಿಧ ಎಲ್ಲಾ ಕ್ರೀಡೆಗಳಂತೆ ಕಂಬಳ ಕೂಡಾ ಬೆಳೆಯುತ್ತೆ ಎಂದರು.
ದೀರ್ಘಕಾಲದ ಸಂದಿ ನೋವು & ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ: ಇಲ್ಲಿದೆ ಉಚಿತ – ಸಲಹೆ, ಸರಳ ಚಿಕಿತ್ಸೆ
ಕಂಬಳಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಬೆಂಗಳೂರು ಮಾತ್ರವಲ್ಲದೆ, ಕರಾವಳಿ ಭಾಗದ ಸಾಕಷ್ಟು ಮಂದಿ ಕಂಬಳಾಭಿಮಾನಿಗಳು ಭಾಗಿಯಾಗಿದ್ದಾರೆ. ಅಭಿಮಾನಿಗಳು ಕಂಬಳ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕಂಬಳಕ್ಕೆ ಇನ್ನಷ್ಟು ಪ್ರೋತ್ಸಾಹಿಸುವಂತೆ ಒತ್ತಾಯಿಸಿದ್ದಾರೆ. ಕಂಬಳದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.