ಬಿಗ್ ಮನೆಯ (Bigg Boss Kannada 10) ಮಾತಿನ ಮಲ್ಲಿ ನೀತು ವನಜಾಕ್ಷಿ (Neethu Vanajakshi) ಮತ್ತೆ 2ನೇ ಬಾರಿ ಕ್ಯಾಪ್ಟನ್ ಆಗಿ ಗೆದ್ದು ಬೀಗಿದ್ದಾರೆ. ಮೈಕಲ್ಗೆ ಠಕ್ಕರ್ ಕೊಟ್ಟು ಮತ್ತೆ ನೀತು ಮನೆಯ ಕ್ಯಾಪ್ಟನ್ ಆಗಿದ್ದಾರೆ.
ನೀತು ಈ ಹಿಂದೆಯೂ ಒಂದು ಬಾರಿ ಕ್ಯಾಪ್ಟನ್ ಆಗಿದ್ದರು. ಈ ಮತ್ತೆ ಕ್ಯಾಪ್ಟನ್ ಆಗುವ ಅವಕಾಶ ದಕ್ಕಿದೆ. ಬಿಗ್ ಬಾಸ್ ಈ ಬಾರಿ 2 ತಂಡಗಳಾಗಿ ವಿಂಗಡಿಸಿದ್ದರು.
ಗಜಕೇಸರಿ ಮತ್ತು ಸಂಪತ್ತಿಗೆ ಸವಾಲ್ ಎಂಬ ಮೈಕಲ್ ಮತ್ತು ಸಂಗೀತಾ ಕ್ಯಾಪ್ಟನ್ ಆಗಿದ್ದಾರೆ. ಬಿಗ್ ಬಾಸ್ ನೀಡಿರುವ ಹೆಚ್ಚಿನ ಟಾಸ್ಕ್ನಲ್ಲಿ ಸಂಪತ್ತಿಗೆ ಸವಾಲ್ ಅಂದರೆ ಮೈಕಲ್ ಟೀಮ್ ಗೆದ್ದು ಬೀಗಿತ್ತು. ಸಂಗೀತಾ ಟೀಮ್ ಈ ಬಾರಿ ಮಕಾಡೆ ಮಲಗಿತ್ತು.
ಆ ನಂತರ ಮೈಕಲ್ ಟೀಮ್ನಲ್ಲಿಯೇ ಕ್ಯಾಪ್ಟನ್ಸಿಗಾಗಿ ಗುದ್ದಾಟ ನಡೆಯಿತು. ತನಿಷಾ, ನೀತು, ಮೈಕಲ್, ತುಕಾಲಿ ನಾಲ್ವರು ರೇಸ್ನಲ್ಲಿದ್ದರು. ಕಡೆಯದಾಗಿ ಟಾಸ್ಕ್ನಲ್ಲಿ ಮೈಕಲ್- ನೀತುಗೆ ಕಾಂಪಿಟೇಶನ್ ಶುರುವಾಯಿತು. ಆದರೆ ರಿಂಗ್ ಮಾಸ್ಟರ್ ಮೈಕಲ್ಗೆ ಚಮಕ್ ಕೊಟ್ಟು ನೀತು, 7ನೇ ವಾರದ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.