ಬೆಂಗಳೂರು:- ದರೋಡೆಕೋರರ ರಕ್ಷಣೆಯೇ ಸರ್ಕಾರದ ಧ್ಯೇಯ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧದ ಸಿಬಿಐ ಕೇಸ್ ವಾಪಸ್ ಪಡೆಯಲು ಸಂಪುಟ ಅನುಮೋದನೆ ನೀಡಿದ ಕುರಿತು ಈ ಪ್ರತಿಕ್ರಿಯೆ ನೀಡಿದರು.
ಮರ್ಯಾದೆ ಇರುವವರು ಹೆದರುತ್ತಾರೆ.
ಮರ್ಯಾದೆ ಇಲ್ಲದವರಿಗೆ ಕೋರ್ಟ್ನಲ್ಲಿ ಇದ್ದರೇನು? ಯಾವುದಲ್ಲಿದ್ದರೆ ಏನು? ಯಾವುದನ್ನು ಬೇಕಾದರೂ ಕೊಂಡುಕೊಳ್ಳುತ್ತೇವೆ ಎನ್ನುವ ದುರಹಂಕಾರ ದಲ್ಲಿರುತ್ತಾರೆ. ಅಂತಹವರಿಗೆ ಏನು ಹೇಳುವುದು ಎಂದು ವ್ಯಂಗ್ಯವಾಡಿದರು.
ಸರ್ಕಾರದಲ್ಲಿ ನಡೆಯುತ್ತಿರುವ ಚಟುವಟಿಕೆಯ ಬಗ್ಗೆ ಬಹಳ ಮಾತನಾಡುವುದು ಇದೆ. ಚರ್ಚೆ ಮಾಡೋಣ, ಆ ಬಗ್ಗೆ ಆತುರ ಬೇಡ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.