ಬೆಂಗಳೂರು : ಡಿ.ಕೆ. ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆ ಅಮಾನತು ವಿಚಾರ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಡಿ.ಕೆ. ಶಿವಕುಮಾರ್ ಅವರ ಕುರಿತು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿಗರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
Vijayendra saval: ಡಿಕೆಶಿ ರಾಜ್ಯದ ಜನರ ಮುಂದೆ ಈಗ ಸತ್ಯ ಹರಿಶ್ಚಂದ್ರರು ಅಂತ ಸಾಬೀತು ಮಾಡಲಿ: ವಿಜಯೇಂದ್ರ ಸವಾಲ್!
ಕಳೆದ 9ರಿಂದ 10 ವರ್ಷದಿಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿರೋಧ ಪಕ್ಷಗಳನ್ನು ಮುಗಿಸಲು ಸಂಚು ರೂಪಿಸುತ್ತಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಕೇವಲ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿ ಆಗುತ್ತೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂಬ ಭಯದಲ್ಲಿ ಈ ಹಿಂದೆ ಡಿ.ಕೆ. ಶಿವಕುಮಾರ್ ಮೇಲೆ ಇಡಿಯಿಂದ ದಾಳಿ ನಡೆಸಲಾಯಿತು ಎಂದು ಕುಟುಕಿದ್ದಾರೆ.
13 ತಿಂಗಳ ನಂತರ ಎಫ್ಐಆರ್
24-09-2019ರಂದು ಅಂದಿನ ಬಿಜೆಪಿ ಸರ್ಕಾರದ ಸಿಎಂ ಫೋನ್ ನಲ್ಲಿ ನೇರವಾಗಿ ಸಿಬಿಐ ಜೊತೆ ಮಾತನಾಡಿದ್ದರು. ಪ್ರಕಾರಣವನ್ನು ಸಿಬಿಐಗೆ ವರ್ಗಾಯಿಸುವ ಮೊದಲು ಅನುಸರಿಸಬೇಕಿದ್ದ ಮಾನದಂಡಗಳನ್ನು ಸರ್ಕಾರ ಪಾಲಿಸಿಲ್ಲ. ರಾಜ್ಯ ತನಿಖಾ ತಂಡಗಳನ್ನು ನಿರ್ಲಕ್ಷಿಸಿ ಕೇಂದ್ರ ತನಿಖಾ ತಂಡಕ್ಕೆ ನೀಡುವ ಅನಿವಾರ್ಯತೆ ಏನಿತ್ತು? ಪ್ರಕಾರಣದ ಕುರಿತು ಎಫ್ಐಆರ್ (FIR) ಕೂಡ ದಾಖಲಾಗಿರಲಿಲ್ಲ. 13 ತಿಂಗಳ ನಂತರ ಎಫ್ಐಆರ್ (FIR) ದಾಖಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.