ವಾಷಿಂಗ್ಟನ್: ಮನೆಯಲ್ಲಿ ಜಿರಲೆ ಕಂಡ್ರೆ ಅದನ್ನ ಕಡ್ಡಿಯಲ್ಲೋ ಪೊರಕೆಯಲ್ಲೋ ಹಿಡಿದು ಹೊರಗೆಸೆಯುತ್ತಾರೆ. ಆದ್ರೆ ಹಾವು ಬಂದ್ರೆ ಹಾಗೆ ಮಾಡೋಕಾಗುತ್ತಾ? ಇಲ್ಲ ಅನ್ನೋದಾದ್ರೆ ಇಲ್ಲಿ ಕೇಳಿ, ಅಮೆರಿಕದಲ್ಲಿ ಮಹಿಳೆಯೊಬ್ಬರು ತಲೆದಿಂಬಿನ ಕವರ್ʼನಲ್ಲೇ ದೈತ್ಯ ಹಾಗೂ ಭಯಾನಕವಾದ ಹಾವನ್ನ ಹಿಡಿದು ಹೊರಗೆಸೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.
ನಾನು ಮನೆಗೆ ಬಂದಾಗ 5-6 ಅಡಿ ಉದ್ದದ ಈ ಹಾವು ಕಾಣಿಸಿತು ಅಂತ ಟ್ಯಾಟೂ ಕಲಾವಿದೆಯಾಗಿರೋ ಸನ್ಶೈನ್ ಮ್ಯಾಕ್ಕರ್ರಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ ಈ ವಿಡಿಯೋವನ್ನ ಹಾಕಿದ್ದಾರೆ. ಮನೆಯ ಹಾಲ್ನಲ್ಲಿ ಇದ್ದ ಕಪ್ಪು ಬಣ್ಣದ ದೈತ್ಯ ಹಾವನ್ನು ಕಂಡು ಒಂದು ತಲೆದಿಂಬಿನ ಕವರ್ ತಂದು ಹಾವಿನ ಹಿಂದೆ ಹೋಗಿ ಅದನ್ನ ನಾಯಿಮರಿ ಹಿಡಿದಷ್ಟು ಸಲೀಸಾಗಿ ಹಿಡಿದಿದ್ದಾರೆ. ನಂತರ ಅದನ್ನ ತೆಗೆದುಕೊಂಡು ಹೋಗುವಾಗಲೂ ಅದರ ಮುಖ ಕವರ್ನಿಂದ ಹೊರಗೆ ಬಂದ್ರೆ ಕೈಯ್ಯಲ್ಲೇ ಅದನ್ನ ಒಳಗೆ ನೂಕಿದ್ದಾರೆ.
https://www.facebook.com/sunshine.mccurry/videos/1537616829590134/?ref=embed_video&t=106
ನಂತರ ಹಾವನ್ನ ಮನೆಯಿಂದ ಹೊರಗೆ ಹೋಗಿ ಬಿಟ್ಟಿದ್ದಾರೆ. ಆ ಹಾವು ಅತ್ತಿತ್ತ ಹೋಗದಂತೆ ಬ್ರಿಡ್ಜ್ ಕೆಳಗೆ ಹರಿದು ಹೋಗುವವರೆಗೂ ಅದರ ಹಿಂದೆಯೇ ಹೋಗಿದ್ದಾರೆ. ಕೋಳಿ ಮರಿಯನ್ನ ಗೂಡು ಸೇರಿಸುವಂತೆ ಈ ಮಹಿಳೆ ಹಾವನ್ನ ಅಟ್ಟಿಕೊಂಡು ಹೋಗಿ ಬ್ರಿಡ್ಜ್ವರೆಗೆ ಬಿಟ್ಟಿದ್ದಾರೆ. ಈ ಎಲ್ಲಾ ದೃಶ್ಯವನ್ನ ಮಹಿಳೆಯ ಜೊತೆಗಿದ್ದ ಮತ್ತೊಬ್ಬರು ವಿಡಿಯೋ ಮಾಡಿದ್ದಾರೆ.