ಧಾರವಾಡ: ರಾಜ್ಯ ಸರ್ಕಾರಗಳು ಒಂದು ಪ್ರಕರಣವನ್ನು ತನಿಖೆ ನಡೆಸಲು ಸಿಬಿಐಗೆ ಶಿಫಾರಸು ಮಾಡುವ ಹಾಗೂ ಹಿಂಪಡೆಯುವ ಅಧಿಕಾರ ಇರುತ್ತದೆ. ಈಗ ಡಿಕೆಶಿಯವರ ಪ್ರಕರಣದಲ್ಲಿ ಕ್ಯಾಬಿನೆಟ್ ನಿರ್ಣಯ ತೆಗೆದುಕೊಂಡಿದೆ. ಇಂತಹ ಸಂದರ್ಭಗಳಲ್ಲಿ ವಾದ ವಿವಾದ ಇದ್ದೇ ಇರುತ್ತದೆ. ಆದರೆ ನಾನು ಈ ವಿಚಾರದಲ್ಲಿ ಸರ್ಕಾರದ ಪರವಾಗಿ ನಿಲುತ್ತೇನೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಕೃಷಿ ವಿವಿ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಪಮುಖ್ಯಂಮತ್ರಿ ಅವರ ಮೇಲಿನ ಆಕ್ರಮ ಆಸ್ತಗಳಿಕ್ಕೆ ಪ್ರಕರಣದ ತನಿಖೆಉನ್ನು ಸಿಬಿಐ ನಡೆಸುತಿದ್ದು, ಇದನ್ನು ಹಿಂಪಡೆಯಲು ಈಗ ಕ್ಯಾಬಿನೆಟ್ನಲ್ಲಿ ತೀರ್ಮಾಣ ಮಾಡಲಾಗಿದೆ. ಕ್ಯಾಬಿನೆಟ್ ಅಂದರೆ ಸರ್ಕರವೇ ಆಗಿರುತ್ತದೆ. ಹಾಗಾಗಿ ನಾನು ಸರ್ಕಾರದ ಪರವಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು. ಸಿಬಿಐಗೆ ವಹಿಸಿದ್ದು ಹಿಂದಿನ ಸರ್ಕಾರದ ನಿರ್ಧಾರ ಎನ್ನುವ ಚರ್ಚೆ ಇರಬಹುದು.
ಈಗ ಸರ್ಕಾರ ತೆಗೆದುಕೊಂಡ ನಿರ್ಧಾರವೇ ಅಂತಿಮ. ಕಾನೂನಿನ ಅಡಿಯಲ್ಲಿ ಯಾರು ಬೇಕಾದರೂ ಮೇಲ್ಮನವಿ ಹೋದರೆ ಹೋಗಲಿ. ತಮ್ಮ ಮೇಲಿನ ತನಿಖೆ ವಾಪಸ್ ಪಡೆಯುವಂತೆ ಕ್ಯಾಬಿನೆಟ್ ಮೇಲೆ ಡಿಕೆಶಿ ಅವರು ಒತ್ತಡ ಹಾಕುವಂತದ್ದು ಇರುವುದಿಲ್ಲ. ಎಲ್ಲರೂ ಸೇರಿ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ನಿನ್ನೆ ಸಭೆಯಲ್ಲಿ ಇರಲಿಲ. ತೆಲಂಗಾಣ ಪ.ಚಾರದಲಿದೆ. ಹೀಗಾಗಿ ಸಭೆಯ ಹೆಚ್ಚಿನವಿವರಗಳು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.