ಹಾಸನ: ಮಾಜಿ ಸಚಿವ ಎಚ್ ಡಿ ರೇವಣ್ಣ ಆಪ್ತ ಉದ್ಯಮಿ ಕೃಷ್ಣಗೌಡ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಆರೋಪಿಗಳ ಬಂಧನದ ವಿಷಯದಲ್ಲಿ ಜಿಲ್ಲಾ ಪೊಲೀಸ್ ವಿಫಲಗೊಂಡಿದ್ದರಿಂದ ಪ್ರಕರಣ ಹಳ್ಳಹಿಡಿದು ಹೋಗಬಹುದು ಎನ್ನುವ ಹಂತದಲ್ಲಿ ಕಾನೂನು,
Kambala: ಬೆಂಗಳೂರಲ್ಲಿ ಅದ್ದೂರಿಯಾಗಿ ನ. 25, 26ರಂದು ನಡೆಯಲಿರುವ ನಮ್ಮ ಕಂಬಳ: ಹೇಗಿದೆ ಸಿದ್ಧತೆ!
ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಿದ್ದಾರೆ. ಈಗ ಸಿಐಡಿ ಪ್ರವೇಶದಿಂದ ಪ್ರಕರಣದ ತನಿಖೆಯ ದಿಕ್ಕು ಬದಲಾಗುವ ಸಾಧ್ಯತೆ ಇದೆ. ಶುಕ್ರವಾರವೇ ಸಿಐಡಿಯ ತನಿಖಾಧಿಕಾರಿ ನಗರಕ್ಕೆ ಆಗಮಿಸಲಿದ್ದು ಆರೋಪಿಗಳಿಗೆ ಮತ್ತೊಮ್ಮೆ ಡ್ರಿಲ್ ಆರಂಭವಾಗಲಿದೆ.