ಇಸ್ಲಾಮಾಬಾದ್: ಸೊಸೆಯ ಮೇಲೆ ಅತ್ಯಾಚಾರವೆಸಗಿದ ಕಾರಣಕ್ಕೆ ಮಹಿಳೆಯೊಬ್ಬರು ತನ್ನ ಗಂಡನನ್ನೇ ಗುಂಡಿಟ್ಟು ಕೊಲೆ ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಇಲ್ಲಿನ ಶಾಂಗ್ಲಾ ಗ್ರಾಮದ ನಿವಾಸಿಯಾದ ಬೇಗಂ ಬೀಬಿ ತನ್ನ ಗಂಡ ಗುಲ್ಬರ್ ಖಾನ್ನನ್ನು ಕೊಲೆ ಮಾಡಿದ್ದಾರೆ. ಅವರು ಕುಟುಂಬ ಮತ್ತು ಸಂಬಂಧಗಳಿಗೆ ಬೆಲೆ ಕೊಡಲಿಲ್ಲ. ಹೀಗಾಗಿ ಕೊಲೆ ಮಾಡಿದೆ ಎಂದು ಬೇಗಂ ಬೀಬಿ ಒಪ್ಪಿಕೊಂಡಿದ್ದಾರೆ.
ಗುಲ್ಬರ್ ಖಾನ್ ಕಳೆದ 3 ತಿಂಗಳಿನಿಂದ ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನೆಂದು ಬೀಬಿ ಹೇಳಿದ್ದಾರೆ. ಅತ್ಯಾಚಾರಕ್ಕೊಳಗಾಗಿದ್ದಾರೆ ಎನ್ನಲಾದ ಮಹಿಳೆಯ ಗಂಡ ಸೈನಿಕರಾಗಿದ್ದು, ಈ ಬಗ್ಗೆ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಹೆಂಡತಿಯ ಸ್ಥಿತಿಯ ಬಗ್ಗೆ ನನಗೆ ಗೊತ್ತಿತ್ತು. ಆದ್ರೆ ತಂದೆಯೆಂಬ ಗೌರವದಿಂದ ಅವರನ್ನು ನಾನು ಕೊಲ್ಲುವುದು ಅಸಾಧ್ಯ.
Kambala: ಬೆಂಗಳೂರಲ್ಲಿ ಅದ್ದೂರಿಯಾಗಿ ನ. 25, 26ರಂದು ನಡೆಯಲಿರುವ ನಮ್ಮ ಕಂಬಳ: ಹೇಗಿದೆ ಸಿದ್ಧತೆ!
ಆದ್ರೆ ನಾನು ತರಬೇತಿ ಮುಗಿಸಿ ಹಿಂದಿರುಗಿದ ನಂತರ ಮನೆಯಿಂದ ಹೊರಹೋಗುತ್ತೇನೆ ಎಂದು ನನ್ನ ತಾಯಿಗೆ ಹೇಳಿದ್ದೆ ಎಂದಿದ್ದಾರೆ. ಗುಲ್ಬರ್ ಖಾನ್ ಮಲಗಿದ್ದ ವೇಳೆ ಬೀಬಿ ತನ್ನ ಸೊಸೆಯ ನೆರವು ಪಡೆದು ಪಿಸ್ತೂಲ್ನಿಂದ ಗುಂಡಿಟ್ಟು ಗಂಡನನ್ನು ಕೊಲೆ ಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಬೇಗಂ ಬೀಬಿ, ಆಕೆಯ ಸೊಸೆ ಹಾಗೂ ಮಗನನ್ನು ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದು, ಸದ್ಯ ಅವರನ್ನ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.