ಧಾರವಾಡ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಸರಂಬಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹರಾಜರಿಗೆ ಅವಮಾನ ಮಾಡಿರುವ ಘಟನೆ ಖಂಡಿಸಿ ಹಾಗೂ ಪದೇ ಪದೇ ಶಿವಾಜಿ ಮಾಹರಾಜರ ಅಪಮಾನ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ, ಧಾರವಾಡದಲ್ಲಿ ಮರಾಠ ಸಮಾಜದ ಮುಖಂಡರು ಮನವಿ ಸಲ್ಲಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಗೆ ಬಂದ ಮರಾಠ ಮಡಳ ಮುಖಂಡರು ಹಾಗೂ ಸಮಾಜದ ಮುಖಂಡರು ಶ್ರೀ ಶಿವಾಜಿ ಮಹರಾಜರಿಗೆ ಅಪಮಾನ ಮಾಡುವವರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಸರಂಬಿ ಗ್ರಾಮದಲ್ಲಿನ ಮುಸ್ಲಿಂ ಕೆಲವು ಕಿಡಗಡಿಗಳು ಟಿಪ್ಪು ಸುಲ್ತಾನ ಮುಂದೆ ಬೇಡಿಕೊಳ್ಳುವ ರೀತಿ ಶಿವಾಜಿ ಮಹರಾಜರ ಪೋಟೊಎಡಿಟ್ ಮಾಡಿ ಅಪಮಾನ ಮಾಡಿದ್ದಾರೆ. ಈಗಾಗಲೇ ಆ ಕೃತ್ಯ ನಡೆಸಿದವರನ್ನು ಬಂಧನ ಮಾಡಲಾಗಿದೆ. ಆದರೆ ಈ ರೀತಿಯ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ನಾವು ಎಲ್ಲ ಸಮಾಜದ ನಾಯಕರನ್ನು ಹಾಗೂ ಗುರುಗಳನ್ನು ಗೌರವದಿಂದ ಕಾಣುತ್ತವೆ. ಆದರೆ ಕೆಲವು ಕಿಡಗೆಡಿಗಳು ನಮ್ಮ ಸಮಾಜದ ನಾಯಕ ಹಿಂದೂ ಸಮಾಜ ಉಳಿವಿಗಾಗಿ ಶ್ರಮಿಸಿದ ಛತ್ರಪತಿ ಶಿವಾಜಿ ಮಹರಾಜರ ಭಾವಚಿತ್ರ ಅವಮಾನಿಸುತ್ತಲೇ ಬರುತ್ತಿದ್ದಾರೆ. ಇಂತಹಘಟನೆ ಮರುಕಳಿಸದಂತೆ ಸರ್ಕಾರ ಗೃಹ ಸಚಿವರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.