ಜನಪ್ರಿಯ ಸೀರಿಯಲ್ ‘ರಂಗನಾಯಕಿ’ ಮೂಲಕ ಪರಿಚಿತರಾದ ನಟಿ ಪ್ರೇರಣಾ ಕಂಬಂ (Prerana Kambam) ಅವರು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಶ್ರೀಪಾದ್ ದೇಶಪಾಂಡೆ ಜೊತೆ ನಟಿ ಹಸೆಮಣೆ ಏರಿದ್ದಾರೆ.
ಇತ್ತೀಚೆಗೆ ಪ್ರೇರಣಾ ಅವರು ಶ್ರೀಪಾದ್ ಜೊತೆ ಅದ್ದೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಇದೀಗ ಬೆಂಗಳೂರಿನಲ್ಲಿ ಖಾಸಗಿ ರೆಸಾರ್ಟ್ವೊಂದರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ನಟಿ ಮದುವೆಯಾಗಿದ್ದಾರೆ. ಈ ಮದುವೆಗೆ ನಮ್ಮನೆ ಯುವರಾಣಿ ಸೀರಿಯಲ್ ನಟಿ ಅಂಕಿತಾ ಅಮರ್ ಆಗಮಿಸಿದ್ದರು.
ಸ್ಪೆಷಲ್ ಫೋಟೋಶೂಟ್ ಮೂಲಕ ನಟಿ ಕೆಲ ದಿನಗಳ ಹಿಂದೆ ಭಾವಿ ಪತಿಯನ್ನ ಸೋಷಿಯಲ್ ಮೀಡಿಯಾದಲ್ಲಿ ಪರಿಚಯಿಸಿದ್ದರು. ಅಷಕ್ಕೂ ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಎಂಬುದರ ಬಗ್ಗೆ ಮಾಹಿತಿ ಇಲ್ಲ
‘ರಂಗನಾಯಕಿ’ (Ranganayaki) ಸೀರಿಯಲ್ನಲ್ಲಿ ಹೀರೋಯಿನ್ ಆಗಿ ನಟನಾ ಕ್ಷೇತ್ರಕ್ಕೆ ಪರಿಚಿತರಾದ ಪ್ರೇರಣಾ ಬಳಿಕ ಕನ್ನಡದ ಮಿನಿ ಬಿಗ್ ಬಾಸ್ನಲ್ಲಿ ಕಾಣಿಸಿಕೊಂಡಿದ್ದರು. ‘ಫಿಸಿಕ್ಸ್ ಟೀಚರ್’ ಎಂಬ ಚಿತ್ರದಲ್ಲಿ ನಟಿಸಿದ್ದರು. ತೆಲುಗಿನಲ್ಲಿ ‘ಕೃಷ್ಣ ಮುಕುಂದ ಮುರಾರಿ’ ಸೀರಿಯಲ್ನಲ್ಲಿ ಪ್ರೇರಣಾ ಲೀಡ್ ರೋಲ್ನಲ್ಲಿ ನಟಿಸಿದ್ದರು.