ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಹಿಡಕಲ ರಸ್ತೆಯ ಒಂದನೇ ಕಾಲುವೆಯ ಬಳಿ ಜಮೀನಲ್ಲಿ ಹರಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಬಸಪ್ಪ ಅಥಣಿ (65) ಮೃತಪಟ್ಟವರು.
ತಮ್ಮ ಜಮೀನಿನಲ್ಲಿ ಹೋಗಿ ಮರಳಿ ಬರುವಾಗ ಅಲ್ಲೇ ತುಂಡಾಗಿ ಬಿದ್ದಿದ್ದ ಹೆಸ್ಕಾಂ ವಿದ್ಯುತ್ ತಂತಿ ( ಎಲ್ ಟಿ ಲೈನ್) ಬಸಪ್ಪ ಅವರ ಗಮನಕ್ಕೆ ಬಂದಿರಲಿಲ್ಲ ಹೊಟ್ಟೆ ಹಾಗೂ ಕೈಗಳಿಗೆ ವಿದ್ಯುತ್ಪರ್ಶವಾಗಿ ಮೃತಪಟ್ಟಿದ್ದಾರೆ ಎಂದು ಮೃತರು ಪುತ್ರ ರಾಜು ಬಸಪ್ಪ ಅಥಣಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ತೇರದಾಳ ಪಿಎಸ್ಐ ಅಪ್ಪು ಐಗಳಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪ್ರಕಾಶ ಕುಂಬಾರ
ಬಾಗಲಕೋಟೆ