ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮದಲಮಟ್ಟಿ ಗ್ರಾಮದಲ್ಲಿ ಮಹಿಳೆಯೊಬ್ಬರು ಸಂಶಯಸ್ಪದವಾಗಿ ಮೃತಪಟ್ಟ ಪ್ರಕರಣ ಬೆಳಕಿಗೆ ಬಂದಿತ್ತು. ಮದಲಮಟ್ಟಿ ಗ್ರಾಮದ ಕಬ್ಬಿನ ಜಮೀನಿನಲ್ಲಿ ನಾಗವ್ವ ಸಿದ್ದಪ್ಪ ಯಲ್ಲಟ್ಟಿ (46) ಶವ ಕೊಳೆತು ದುರ್ವಾಸನೆ ಬರುತ್ತಿತ್ತು. ಘಟನೆ ಬಗ್ಗೆ ಮಾಹಿತಿ ತಿಳಿದ ತೇರದಾಳ ಪೊಲೀಸ್ ಠಾಣೆ ಪಿಎಸ್ಐ ಅಪು ಐಗಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ನಾಗವ್ವ ಅವರ ತಾಯಿ ನೀಲವ್ವ ಇತ್ನಾಳ ಮಗಳ ಸಾವಿನ ಕುರಿತು ಸಂಶಯವಿರುವುದಾಗಿ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪಿಎಸ್ಐ ಅಪು ಮತ್ತು ಬನಹಟ್ಟಿ ಸಿಪಿಐ ಸಂಜೀವ ಬಳಗಾರ ತನಿಖೆ ಆರಂಭಿಸಿ ನಾಗವ್ವ ಕೊಲೆ ಆಗಿರುವುದನ್ನು ದುಡಪಡಿಸಿದ್ದು ಕೊಲೆ ಆರೋಪಿ ಹಳಿಂಗಳಿ ಗ್ರಾಮದ ಕಲ್ಲಪ್ಪ ಪರಪ್ಪ ಚಿನಗಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಹಳ ವರ್ಷಗಳಿಂದ ನಾಗವ್ವ ಜೊತೆ ಅಕ್ರಮ ಸಂಬಂಧ ಹೊಂದಿದ ಕಲ್ಲಪ್ಪ ಆಕೆಯನ್ನು ನವಂಬರ 17 ರಂದು ರಾತ್ರಿ ಕಬ್ಬಿನ ಜಮೀನಿಗೆ ಹೋಗಿ ಆ ವೇಳೆ ಇಬ್ಬರ ನಡುವೆ ಜಗಳ ನಡೆಯಿತು. ಕಲ್ಲಪ್ಪ ಸೀರೆಯಿಂದ ನಾಗವ್ವ ಅವರ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ವಿಚಾರಣೆ ವೇಳೆ ಆರೋಪಿ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ತೇರದಾಳ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎಂ ಆರ್ ಕೆಂಚನ್ನವರ. ಪಿ ಎಸ್ ಗಣಿ. ಅಶೋಕ ಸವದಿ. ವಿವೇಕ ಸುವರ್ಣಖಂಡಿ. ದುಂಡಪ್ಪ ಹಡಪದ. ಮಾನಿಂಗ ಬುಗುತಿ. ರಮೇಶ್ ಬಿರಾದಾರ. ಆರ್ ಎಸ್ ದೇಸಾಯಿ. ತನಿಖಾ ತಂಡದಲ್ಲಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ