ಕಲಬುರಗಿ: ಬರೋಬ್ಬರಿ 8 ವರ್ಷಗಳ ಬಳಿಕ ಇದೇ ಮೊದಲ ಬಾರಿ ಗೆ ವಿಶ್ವ ಟೆನ್ನಿಸ್ ಪಂದ್ಯಾವಳಿ ಕಲಬುರಗಿಯಲ್ಲಿ ನಡೆಯಲಿದೆ. ನವೆಂಬರ್ 26 ರಿಂದ ಡಿಸೆಂಬರ್ 3 ರವರೆಗೆ ಪಂದ್ಯ ನಡೆಯಲಿದ್ದು9 ದೇಶದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಟೆನ್ನಿಸ್ ಹಬ್ಬ ನಡೆಯಲಿದೆ.65 ನೇ ವಿಶ್ವ ಶ್ರೇಯಾಂಕಿತ ಆಟಗಾರ ಎವಜೆನಿ ಡಾನ್ ಸ್ಕಾಯ್ ಸೇರಿದಂತೆ ಹಲವರು ಪಂದ್ಯಾವಳಿಯಲ್ಲಿ ಭಾಗಿಯಾಗುತ್ತಿದ್ದಾರೆ..ಸಚಿವ ಪ್ರಿಯಾಂಕ್ ಖರ್ಗೆ ಪಂದ್ಯ ಉದ್ಘಾಟಿಸಲಿದ್ದಾರೆ ಅಂತ ಜಿಲ್ಲಾಡಳಿತ ತಿಳಿಸಿದೆ..