ನವದೆಹಲಿ:- ರಾಹುಲ್ ಗಾಂಧಿಗೆ EC ನೋಟಿಸ್ ವಿಚಾರ ಇದೇನು ದೊಡ್ಡ ವಿಚಾರವೇನಲ್ಲ ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇತ್ತೀಚಿಗೆ ರಾಜಸ್ಥಾನದ ಜಾಲೋರ್ನಲ್ಲಿ ನಡೆದ ಚುಣಾವಣಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಪನೌತಿ (ಅಪಶಕುನ)’ ಎಂದು ನಿಂದಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ನೀಡಿರುವುದು ದೊಡ್ಡ ವಿಚಾರವೇನಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಯಾರ ಮೇಲೂ ಅಂತಹ ತೀವ್ರ ಟೀಕೆಗಳು ಬಂದಿಲ್ಲ. ಆದರೆ ಚುನಾವಣೆ ನಡೆಯುತ್ತಿರುವುದರಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ ಎಂದಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ಚುನಾವಣೆಯಲ್ಲಿ ಹೆದರಿಸಲು ಯತ್ನಿಸುತ್ತಿರುವ ರೀತಿ ಸರಿಯಿಲ್ಲ. ಪ್ರಜಾಪ್ರಭುತ್ವ ಉಳಿಸಬೇಕಾದರೆ ಸಮವಾದ ವೇದಿಕೆ ಇರಬೇಕು. ಇದರ ಬದಲಾಗಿ ಸರ್ಕಾರಿ ಸಂಸ್ಥೆಗಳಾದ ಇಡಿ, ಸಿಬಿಐ ಇತ್ಯಾದಿಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪ್ರಧಾನಿನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಹೇಳಿಕೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನೋಟಿಸ್ಗೆ ಕಾಂಗ್ರೆಸ್ ಉತ್ತರ ನೀಡಲಿದೆ.
ರಾಹುಲ್ ಗಾಂಧಿಗೆ ನೋಟಿಸ್ ಕಳುಹಿಸಲಿ ನಾವು ಉತ್ತರಿಸುತ್ತೇವೆ. ಇದು ದೊಡ್ಡ ವಿಷಯವಲ್ಲ. ಯಾರ ಮೇಲೂ ಅಂತಹ ತೀವ್ರ ಟೀಕೆಗಳು ಬಂದಿಲ್ಲ. ಆದರೆ ಚುನಾವಣೆ ನಡೆಯುತ್ತಿರುವುದರಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ. ನೋಟಿಸ್ಗೆ ಉತ್ತರ ಕೊಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.