ಪೀಣ್ಯ ದಾಸರಹಳ್ಳಿ:’ ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರವಾಗಿ ಎಲ್ಲೂ ಕಳಪೆ ಕಾಮಗಾರಿ ನಡೆಯಬಾರದು. ಹಾಗೇನಾದರೂ ಕಂಡು ಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಶಾಸಕ ಎಸ್. ಮುನಿರಾಜು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕಮ್ಮಗೊಂಡನಹಳ್ಳಿಯಲ್ಲಿ ಒಂದು ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸಾರ್ವಜನಿಕರಿಂದ ಯಾವುದೇ ದೂರು ಬರದಂತೆ ರಸ್ತೆ, ಚರಂಡಿ ಅಭಿವೃದ್ಧಿ ಆಗಬೇಕು. ಕೆಲವೊಂದು ರಸ್ತೆಗಳ ಪಕ್ಕದ ಚರಂಡಿಗಳಲ್ಲಿ ಜಲ್ಲಿಕಲ್ಲು, ಮಣ್ಣು ತುಂಬಿ ನೀರು ಹರಿಯುತ್ತಿಲ್ಲ ಅದನ್ನು ಕೂಡಲೇ ತೆಗಿಸುವ ಕೆಲಸ ಆಗಬೇಕು’ ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಜನರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ವಿಶ್ವಾಸ ಇಟ್ಟಿದ್ದಾರೆ. ಅದನ್ನು ಹುಸಿಗೊಳಿಸಬಾರದು. ಆದಕಾರಣ ಗುಣಮಟ್ಟದ ರಸ್ತೆ ಅಭಿವೃದ್ಧಿಯಾಗಬೇಕು. ಎಲ್ಲೂ ಕಳಪೆಯಿಂದ ಕೂಡಿರಬಾರದು’ ಎಂದರು.
ಈ ಸಂದರ್ಭದಲ್ಲಿ ದಾಸರಹಳ್ಳಿ ಮಂಡಲ ಬಿಜೆಪಿ ಅಧ್ಯಕ್ಷ ಸೋಮಶೇಖರ್, ಶೆಟ್ಟಿಹಳ್ಳಿ ವಾರ್ಡ್ ಬಿಜೆಪಿ ಅಧ್ಯಕ್ಷ ರಮೇಶ್ ಯಾದವ್, ಬಿಜೆಪಿ ಮುಖಂಡರಾದ ಹನಶ್ರೀ ಮಂಜಣ್ಣ, ಜಬ್ಬಾರ್, ಶ್ರೀಹರಿ, ಅಬ್ಬಿಗೆರೆ ವಿನೋದ್, ಎಇಇ ಕೃಷ್ಣಮೂರ್ತಿ ಮತ್ತು ಸ್ಥಳೀಯರಿದ್ದರು.