ಕೋಲಾರ: ರಾಜ್ಯದಲ್ಲಿನ ಅತಿಥಿ ಉಪನ್ಯಾಸಕರನ್ನು ಖಾಯಂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ.24 ರಿಂದ ನಗರದ ಶಾಶ್ವತ ನೀರಾವರಿ ವೇದಿಕೆಯಲ್ಲಿ ಪದವಿ ಕಾಲೇಜುಗಳ ತರಗತಿಗಳನ್ನು ಬಹಿಷ್ಕಾರಿಸಿ ಅನಿರ್ದಿಷ್ಟವಧಿ ಧರಣಿ ನಡೆಯಲಿದೆ ಎಂದು ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ರಾಜ್ಯಾಧ್ಯಕ್ಷ ನಾಗನಾಳ ಮುನಿಯಪ್ಪ ಅವ್ರು ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಡಿ ನಡೆಸಿ ಮಾತನಾಡಿದ ಅವರು,
ರಾಜ್ಯಾದ್ಯಂತ ಯುಜಿಸಿ ನಿಯಮಾನುಸಾರವಾಗಿ ಸುಮಾರು 10 ಸಾವಿರದ 30 ಮಂದಿ ಹಾಗೂ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ 530 ಮಂದಿ ಕೆಲಸ ಮಾಡುತ್ತಾ ಇದ್ದು ಸರಕಾರ ಕೂಡಲೇ ಅಥಿತಿ ಉಪನ್ಯಾಸಕರನ್ನು ಖಾಯಂ ಸೇರಿದಂತೆ ರಜೆ, ವೇತನ ಸೌಲಭ್ಯದಲ್ಲಿ ಆಗುತ್ತಾ ಇರುವ ತಾರತಮ್ಯವನ್ನು ಸರ್ಕಾರ ಸ್ಪಂದಿಸಬೇಕು ಎಂದು ತಿಳಿಸಿದ್ರು. ರಾಜ್ಯ ಸರಕಾರ ಗ್ರಾಪಂನ ಸಿಬ್ಬಂಧಿ ಹಾಗೂ ಇತರೇ ಇಲಾಖೆ ಸಿಬ್ಬಂದಿಗಳಿಗೆ ಸೇವಾ ಭದ್ರತೆಯನ್ನು ನೀಡಲಾಗಿದೆ.
ಹೀಗಾಗಿ ಇದೇ ಮಾದರಿಯಲ್ಲಿ ಅಥಿತಿ ಉಪನ್ಯಾಸಕರಿಗೂ ಸಹ ಸೇವಾ ಸೌಲಭ್ಯವನ್ನು ನೀಡಬೇಕು ರಾಜ್ಯದಲ್ಲಿ ಅಥಿತಿ ಉಪನ್ಯಾಸಕ ರಾಗಿ ಕಳೆದ 2005 ರಿಂದ ಪದವಿ ಕಾಲೇಜುಗಳಲ್ಲಿ ಸುಮಾರು 1200 ರೂ.ಗಳ ಸಂಬಳಕ್ಕೆ ಸೇರಿದ್ದು, ರಾಜ್ಯದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು 5 ಸಾವಿರಕ್ಕೆ ಏರಿಸಿದ್ದು, ನಂತರ ಬಿಜೆಪಿ ಸರಕಾರದ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ 13 ಸಾವಿರಗಳಿಗೆ ವೇತನ ಹೆಚ್ಚಿಸಿದ್ದರೂ ನಂತರ ಬಂದ ಬಸವರಾಜ ಬೊಮ್ಮಾಯಿ ಅವರು 32 ಸಾವಿರ ರೂ ಗಳಿಗೆ ಏರಿಕೆ ಮಾಡಿದರು ಆದರೆ ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿ ಇದ್ದಾಗ ಅಥಿತಿ ಉಪನ್ಯಾಸಕರ ಪರವಾಗಿ ನಿಂತು ಅವತ್ತು ಬೆಂಬಲ ನೀಡಿದರು.
ಆದರೆ ಇವತ್ತು ರಾಜ್ಯದಲ್ಲಿ ಅವರೇ ಮುಖ್ಯಮಂತ್ರಿಯಾಗಿದ್ದರೂ ಅಥಿತಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸದೇ ಮೌನ ವಹಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಸುಮಾರು 413 ಪದವಿ ಕಾಲೇಜುಗಳು ಇದ್ದು ಅತಿಥಿ ಉಪನ್ಯಾಸಕರು ವಾರದಲ್ಲಿ 15 ತರಗತಿಗಳನ್ನು ಮಾಡಲಾಗುತ್ತಿದೆ. ಅದೇ ಪದವಿ ಕಾಲೇಜಿನ ಖಾಯಂ ಉಪನ್ಯಾಸಕರು ಎರಡೂವರೇ ಲಕ್ಷದಿಂದ 3 ಲಕ್ಷದವರೆಗೂ ವೇತನ ಪಡೆಯುವ ಉಪನ್ಯಾಸಕರು ವಾರಕ್ಕೆ 16 ತರಗತಿಗಳನ್ನು ಅಷ್ಟೇ ಮಾಡುತ್ತಾರೆ.
ಆದರೆ ಲಕ್ಷಾಂತರ ರೂಪಾಯಿ ಮಾಸಿಕ ವೇತನ ಪಡೆಯುತ್ತಾರೆ ಅಥಿತಿ ಉಪನ್ಯಾಸಕರಿಗೆ ವೇತನ ಕಡಿಮೆ, ಹಾಗೂ ಸೇವೆಯ ಅವಧಿಯನ್ನು ಪರಿಶೀಲಿಸಿ,ಆಗುತ್ತಿರುವ ತಾರತಮ್ಯವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಈ ಸುದ್ದಿಗೋಷ್ಟಿಯಲ್ಲಿ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ಗೌರವ ಅಧ್ಯಕ್ಷ ಚಂಜಿಮಲೆ ಶ್ರೀನಿವಾಸ್, ಮಹಿಳಾ ಘಟಕದ ರಾಜ್ಯ ಸಂಚಾಲಕಿ ಸಿಎಂ ನಾಗಮಣಿ, ಜಿಲ್ಲಾಧ್ಯಕ್ಷ ಎ.ಬಿ.ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿನಾರಾಯಣ್, ಸಹ ಕಾರ್ಯದರ್ಶಿ ಕೆ.ಎನ್.ನಾಗರಾಜ್, ಜಿಲ್ಲಾ ಮುಖಂಡರಾದ ಬಾಲಾಜಿ, ಶಿವಣ್ಣ, ಸಿದ್ದರಾಜು, ನಾಗರಾಜ್ ಮುಂತಾದವರು ಇದ್ದರು