ಗದಗ: ಲಕ್ಕುಂಡಿ ಗ್ರಾಮದಿಂದ ನಿರಂತರ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಕಲ್ಯಾಣ ಕರ್ನಾಟಕ ಭಾಗದಿಂದ ಬರುವ ಬಸ್ ಗಳು ಗ್ರಾಮಕ್ಕೆ ಬಾರದಕ್ಕೆ ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ ನಡೆಸಿದರು. ಲಕ್ಕುಂಡಿ ಗ್ರಾಮಕ್ಕೆ ಬಾರದೆ ಬೈಪಾಸ್ ಮೂಲಕ ಗದಗ, ಹುಬ್ಬಳ್ಳಿಗೆ ತೆರಳುವ ಬಸ್ ಗಳು.
ಹುಬ್ಬಳ್ಳಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಮೂಲಕ ತೆರಳುವ ಬಸ್ ಗಳು..ಇದ್ದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸರಿಯದ ಸಮಯಕ್ಕೆ ಬಸ್ ಗಳು ಸಿಗುತ್ತಿಲ್ಲ, ಬೈಪಾಸ್ ನಿಂದ ತೆರಳುವ ಬಸ್ ಗಳಿಗೆ ಲಕ್ಕುಂಡಿ ಬಸ್ ನಿಲ್ದಾಣದವರೆಗೆ ಬರಲು ಸೂಚಿಸಬೇಕು. ಇಲ್ವಾದ್ರೆ ಸಂಪೂರ್ಣ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತೇವೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.