ಕಲಬುರಗಿ: ರಾಜ್ಯದಲ್ಲಿ ಪ್ರಜಾಪ್ರಭುತ್ವ ಆಡಳಿತ ನಡೀತಿದೆಯಾ ಇಲ್ಲಾ ನಿಜಾಮನ ಆಡಳಿತ ನಡೆದಿದೆಯಾ ಅಂತ ಬಿಜೆಪಿ ಮಾಜಿ ಶಾಸಕ ಪಿ.ರಾಜೀವ್ ಪ್ರಶ್ನೆ ಮಾಡಿದ್ದಾರೆ.. ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜೀವ್ ಕಾಂಗ್ರೆಸ್ ಸರ್ಕಾರವನ್ನ ನಿಜಾಮನ ಆಡಳಿತಕ್ಕೆ ಹೋಲಿಸಿದ್ದಾರೆ.
ಈ ಹಿಂದೆ ಯಾರಾದ್ರೂ ನಿಜಾಮನ ಆಡಳಿತದ ತಪ್ಪುಗಳನ್ನ ಎತ್ತಿ ತೋರಿಸಿ ಮಾತನಾಡಿದ್ರೆ ಏನಾಗುತಿತ್ತೋ ಅದೇ ಪರಸ್ತಿತಿ ಈಗ ಕಾಂಗ್ರೆಸ್ ಸರ್ಕಾರದಲ್ಲಿ ಹಾಗೇ ಆಗ್ತಿದೆ.ಅಮಾಯಕರ ಮೇಲೆ ಹಲ್ಲೆ ನಡೆದ್ರೂ ಸರ್ಕಾರ ಕ್ರಮ ತಗೋತಿಲ್ಲ…ಉಸ್ತುವಾರಿ ಸಚಿವರಂತೂ ಯಾವುದೇ ತಲೆಬುಡ ಇಲ್ಲದೇ ಮಾತಾಡ್ತಿದ್ದಾರೆ ಅಂತ ರಾಜೀವ್ ಹೇಳಿದ್ರು..