ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ಗೆ (Lucknow Super Giants) ಗುಡ್ಬೈ ಹೇಳಿದ್ದಾರೆ.
ಅಧಿಕೃತವಾಗಿ ಎಲ್ಎಸ್ಜಿ (LSG) ತೊರೆದು ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡಕ್ಕೆ ಮತ್ತೆ ಮರಳಿದ್ದಾರೆ. ಕೆಕೆಆರ್ ತಂಡದಲ್ಲಿದ್ದಾಗ ನಾಯಕರಾಗಿ ಎರಡು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದರು. ಕೆಕೆಆರ್ನ ಸಿಇಒ ವೆಂಕಿ ಮೈಸೂರು (Venky Mysuru) ಅವರು ಬುಧವಾರ ಈ ಸಂಬಂಧ ಮಾಹಿತಿ ಹಂಚಿಕೊಂಡಿದ್ದಾರೆ.
ಗಂಭೀರ್ ಮೆಂಟರ್ ಆಗಿ ಬರುತ್ತಿರುವುದನ್ನು ಕೆಕೆಆರ್ ಸಹ-ಮಾಲೀಕ ಶಾರುಖ್ ಖಾನ್ ಸ್ವಾಗತಿಸಿದ್ದಾರೆ. ಫ್ರಾಂಚೈಸಿಗೆ ಗಂಭೀರ್ ಆಗಮನವನ್ನು ‘ನಾಯಕನ ಹಿಂತಿರುಗುವಿಕೆ’ ಎಂದು ಬಣ್ಣಿಸಿದ್ದಾರೆ.
ಗಂಭೀರ್ ಎರಡು ವರ್ಷಗಳ ಕಾಲ LSG ಯ ಸಲಹೆಗಾರರಾಗಿ ಪಾತ್ರ ನಿರ್ವಹಿಸಿದ್ದರು. IPL 2022 ಆವೃತ್ತಿಯಲ್ಲಿ ತಂಡ ಫೈನಲ್ ತಲುಪಲು ಅಪಾರ ಶ್ರಮಿಸಿದ್ದರು. 2023 ರ ಆವೃತ್ತಿಯಲ್ಲಿ LSG ಲೀಗ್ ಸ್ಟ್ಯಾಂಡಿಂಗ್ನಲ್ಲಿ ಮೂರನೇ ಸ್ಥಾನ ಗಳಿಸಿತು. ಆದರೆ ಸತತವಾಗಿ ಎರಡನೇ ಬಾರಿಗೆ ಫೈನಲ್ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ