ಹುಬ್ಬಳ್ಳಿ: ಭಾರತದ ನಂ.1 ಮಾಹಿತಿ ಶೋಧ ತಾಣವಾಗಿರುವ ಜಸ್ಟ್ ಡಯಲ್ನ ಉದ್ಯಮ ಶ್ರೇಷ್ಠತೆ ಪ್ರಶಸ್ತಿ ಪ್ರದಾನದ ಮೊದಲ ಆವೃತ್ತಿಯ ಸಮಾರಂಭ ನ. 18 ರಂದು ಇಲ್ಲಿ ನಡೆಯಿತು. ಹುಬ್ಬಳ್ಳಿಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಸಶಕ್ತಗೊಳಿಸಲು ವಿನ್ಯಾಸಗೊಳಿಸಲಾದ ಸಂಪರ್ಕ ಜಾಲ ಹೆಚ್ಚಿಸುವ ಮತ್ತು ಮೆಚ್ಚುಗೆಯ ಕಾರ್ಯಕ್ರಮ ಅದಾಗಿತ್ತು. ಜಸ್ಟ್ಡಯಲ್ ವೇದಿಕೆಯಲ್ಲಿ ಸೇರ್ಪಡೆಯಾಗಿರುವ ಸ್ಥಳೀಯ ಉದ್ಯಮ– ವಹಿವಾಟುಗಳಿಗೆ ಬೆಳವಣಿಗೆ ಬಗ್ಗೆ ಮೌಲ್ಯಯುತ ಒಳನೋಟಗಳು ಮತ್ತು ಅವಕಾಶಗಳನ್ನು ಒದಗಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ಕಂಪನಿ ಸಿಇಓ ತಿಳಿಸಿದ್ದಾರೆ.
ಸ್ಥಳೀಯ ‘ಎಂಎಸ್ಎಂಇ’ ಸಮುದಾಯಕ್ಕೆ ಅನುಕೂಲವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದ ವೈವಿಧ್ಯಮಯ ಸಂಪರ್ಕ ಸಭೆಗಳನ್ನೂ ಈ ಕಾರ್ಯಕ್ರಮವು ಒಳಗೊಂಡಿತ್ತು. ರಾಷ್ಟ್ರೀಯ ಸಣ್ಣ ಉದ್ದಿಮೆಗಳ ನಿಗಮ ಲಿಮಿಟೆಡ್ನ ಉಪ ವ್ಯವಸ್ಥಾಪಕ (ಬಿಡಿ) ಪ್ರವೀಣ ಮುಧೋಳ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ‘ಎಂಎಸ್ಎಂಇ’ಗಳಿಗೆ ನೆರವಾಗುವ ಸರ್ಕಾರದ ಯೋಜನೆಗಳು ಮತ್ತು ಉದ್ಯಮಿಗಳ ಬೆಳವಣಿಗೆಯ ಪಯಣದಲ್ಲಿ ‘ಎನ್ಎಸ್ಐಸಿ’ ಹೇಗೆ ಸಹಾಯ ಹಸ್ತ ಚಾಚುತ್ತಿದೆ ಎಂಬುದನ್ನು ಅವರು ವಿವರಿಸಿದರು.
ಹುಬ್ಬಳ್ಳಿಯ ಉದ್ಯಮ ಜಗತ್ತಿನಲ್ಲಿ ಉದ್ಯಮಿಗಳು ತಮ್ಮ ವ್ಯಾಪಾರ – ವಹಿವಾಟಿನ ಜಾಲಗಳನ್ನು ಪರಸ್ಪರ ಸಂಪರ್ಕಿಸಲು, ಸಹಯೋಗ ಹೊಂದಲು ಮತ್ತು ವಿಸ್ತರಿಸಲು ಇದು ಅನುವು ಮಾಡಿಕೊಟ್ಟಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ಒಬ್ಬರಾಗಿರುವ ಎಂಇ4ಯು ಇಂಟರ್ನ್ಯಾಷನಲ್ನ ಮಾಲೀಕ ಮುತ್ತುರಾಜ್ ಮಾತನಾಡಿ “ತಂತ್ರಜ್ಞಾನದ ನೆರವು ಇಲ್ಲದೆ, ನಾವು ಉದ್ಯಮ – ವಹಿವಾಟು ನಡೆಸಲು ಸಾಧ್ಯವಿಲ್ಲ. ಜಸ್ಟ್ಡಯಲ್ ಮೂಲಕ ನಾವು ಎಲ್ಲ ಸೌಲಭ್ಯಗಳು ದೊರೆಯುವಂತೆ ಮಾಡಿದ್ದೇವೆ. ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ನಾವು ನಮ್ಮ ವ್ಯಾಪಾರ – ವಹಿವಾಟಿಗೆ ಅತ್ಯುತ್ತಮ ಪ್ರಯೋಜನಗಳನ್ನು ಪಡೆಯುತ್ತಿದ್ದೇವೆ’ ಎಂದರು.
Kambala: ಬೆಂಗಳೂರಲ್ಲಿ ಅದ್ದೂರಿಯಾಗಿ ನ. 25, 26ರಂದು ನಡೆಯಲಿರುವ ನಮ್ಮ ಕಂಬಳ: ಹೇಗಿದೆ ಸಿದ್ಧತೆ!
ಉದ್ಯಮಗಳ ಉತ್ಕೃಷ್ಟತೆ ಗುರುತಿಸುವ ಬದ್ಧತೆಯ ಭಾಗವಾಗಿ, ಜಸ್ಟ್ಡಯಲ್ನಲ್ಲಿ ಹೆಸರು ಸೇರ್ಪಡೆಯಾಗಿರುವ ಅತ್ಯುತ್ತಮ ಮಾರಾಟಗಾರರನ್ನು ಜಸ್ಟ್ಡಯಲ್ ಮೂರು ವಿಶಿಷ್ಟ ಪ್ರಶಸ್ತಿ ವಿಭಾಗಗಳಲ್ಲಿ ಗೌರವಿಸಿತು. ಧಾರವಾಡದ ಲಾಜಿಕ್ ಕಂಪ್ಯೂಟರ್ ಸೆಂಟರ್ನ ಮಾಲೀಕ ಅಭಿಷೇಕ್ ಮಾತನಾಡಿ, ಈ ಕಾರ್ಯಕ್ರಮವು ಇಂದಿನ ಅಗತ್ಯವಾಗಿದೆ ಎಂದರು. ‘ಪ್ರತಿಯೊಬ್ಬರೂ ಗುರುತಿಸಲ್ಪಟ್ಟ ಮತ್ತು ಬೆಳಕಿಗೆ ಬಂದಿರುವ ಈ ಕಾರ್ಯಕ್ರಮದಿಂದ ಜಸ್ಟ್ಡಯಲ್ ಗ್ರಾಹಕರು ಸಂತೃಪ್ತರಾಗಿದ್ದಾರೆ. ಎರಡನೆಯದಾಗಿ, ಜೆಡಿ ಆ್ಯಪ್ನ ಮಹತ್ವ ಮತ್ತು ಅದನ್ನು ಹೇಗೆ ಬಳಸುವುದು ಎಂಬುದರ ಅರಿವು ಅದ್ಭುತವಾಗಿದೆ.
ಸದ್ಯದ ವಾಣಿಜ್ಯ –ವ್ಯಾಪಾರ ಜಗತ್ತಿನಲ್ಲಿ ಅಂತರ್ಜಾಲ ತಾಣದ ಅಗತ್ಯದ ಕುರಿತು ಈ ಕಾರ್ಯಕ್ರಮದಿಂದ ಹುಬ್ಬಳ್ಳಿ – ಧಾರವಾಡದ ಗ್ರಾಹಕರು ನಿಜವಾಗಿಯೂ ಸಂತೋಷಪಟ್ಟಿದ್ದಾರೆ’ ಎಂದರು. ಕಾರ್ಯಕ್ರಮದ ಯಶಸ್ಸಿನ ಕುರಿತು ಪ್ರತಿಕ್ರಿಯಿಸಿರುವ ಜಸ್ಟ್ಡಯಲ್ ಗ್ರೂಪ್ನ ಉಪಾಧ್ಯಕ್ಷ (ಮಾರಾಟ) ರಾಜೀವ್ ನಾಯರ್ ಅವರು, ‘ಕಾರ್ಯಕ್ರಮದಲ್ಲಿ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಈ ಪ್ರದೇಶದ ಉದ್ಯಮಶೀಲತೆಯ ಉತ್ಸಾಹವನ್ನು ತೋರಿಸುತ್ತದೆ. ಉದ್ಯಮಿಗಳ ವಹಿವಾಟಿನ ಬೆಳವಣಿಗೆಯ ಪಯಣದಲ್ಲಿ ಸ್ಥಳೀಯ ಉದ್ಯಮ – ವ್ಯಾಪಾರಿಗಳ ಜೊತೆಗಿನ ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.
ಇದಕ್ಕೆ ಪೂರಕವಾಗಿ, ಜಸ್ಟ್ಡಯಲ್ನ ಮುಖ್ಯ ಬೆಳವಣಿಗೆ ಅಧಿಕಾರಿ ಶ್ವೇತಾಂಕ್ ದೀಕ್ಷಿತ್ ಮಾತನಾಡಿ, ಈ ಉಪಕ್ರಮವು ಯಶಸ್ವಿಯಾಗಿರುವುದಕ್ಕೆ ತಮ್ಮ ಸಂತಸ ವ್ಯಕ್ತಪಡಿಸಿದರು, ‘ಉತ್ಕೃಷ್ಟತೆಯ ಪ್ರಶಸ್ತಿ ಪ್ರದಾನದ ಮೂಲಕ ನಮ್ಮ ಪ್ರಯತ್ನವು ಹುಬ್ಬಳ್ಳಿಯಲ್ಲಿನ ‘ಎಂಎಸ್ಎಂಇ’ ಸಮುದಾಯವನ್ನು ಸಶಕ್ತಗೊಳಿಸುವುದು ಮತ್ತು ಬೆಂಬಲಿಸುವುದು ಆಗಿದೆ. ಉದ್ಯಮ ವಹಿವಾಟುಗಳನ್ನು ಬೆಂಬಲಿಸಲು ಮತ್ತು ವಿವಿಧ ಪ್ರದೇಶಗಳಲ್ಲಿನ ಉದ್ಯಮಿಗಳ ಕೊಡುಗೆಗಳನ್ನು ಗುರುತಿಸಲು ಈ ಉಪಕ್ರಮವು ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಇತರ ನಗರಗಳಿಗೆ ವಿಸ್ತರಣೆಯಾಗಲಿದೆ’ ಎಂದರು.