ಪಾಕಿಸ್ತಾನ ಕ್ರಿಕೆಟ್ ತಂಡ ಇದೀಗ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲು ಸಜ್ಜಾಗುತ್ತಿದೆ. ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಬಳಿಕ ಪಾಕಿಸ್ತಾನ ತಂಡ ಮೊದಲ ಸರಣಿ ಆಡಲು ಆಸ್ಟ್ರೇಲಿಯಾಕ್ಕೆ ತೆರಳುತ್ತಿದೆ. ಬಾಬರ್ ಆಝಮ್ ಕ್ಯಾಪ್ಟನ್ಸಿ ಬಿಟ್ಟಿರುವ ಕಾರಣ ಅನುಭವಿ ಆರಂಭಿಕ ಬ್ಯಾಟರ್ ಶಾನ್ ಮಸೂದ್ ಟೆಸ್ಟ್ ಕ್ರಿಕೆಟ್ ತಂಡದ ನೂತನ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನವೆಂಬರ್ 21ರಂದು 18 ಸದಸ್ಯರ ಟೆಸ್ಟ್ ತಂಡವನ್ನು ಪ್ರಕಟ ಮಾಡಿದೆ.
ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳು 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು, ಡಿಸೆಂಬರ್ 12ರಿಂದ 2024ರ ಜನವರಿ 7ರವರೆಗೆ ಪಂದ್ಯಗಳು ನಡೆಯಲಿವೆ. ಅನುಭವಿ ಓನರ್ ಶಾನ್ ಮಸೂದ್ ತಂಡವನ್ನು ಮುನ್ನಡೆಸಲಿದ್ದಾರೆ. ಬಾಬರ್ ಆಝಮ್ ಕ್ಯಾಪ್ಟನ್ಸಿ ಬಿಟ್ಟ ಬಳಿಕ ನಡೆಯುತ್ತಿರುವ ಮೊದಲ ಸರಣಿ ಇದಾಗಿದ್ದು, ಪಾಕಿಸ್ತಾನ ತಂಡದ ಪ್ರದರ್ಶನದ ಮೇಲೆ ಪಿಸಿಬಿ ಹದ್ದಿನ ಕಣ್ಣಿಟ್ಟಿದೆ. ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ 3ನೇ ಆವೃತ್ತಿಯ ಭಾಗವಾಗಿ ಈ ಟೆಸ್ಟ್ ಸರಣಿ ನಡೆಯಲಿದೆ. ಆಸ್ಟ್ರೇಲಿಯಾ ತಂಡ 2ನೇ ಆವೃತ್ತಿಯ ಚಾಂಪಿಯನ್ಸ್ ಆಗಿದ್ದು, ತನ್ನ ಟ್ರೋಫಿ ಉಳಿಸಿಕೊಳ್ಳುವ ಅಭಿಯಾನ ಶುರು
ಆಸ್ಟ್ರೇಲಿಯಾ ಪ್ರವಾಸಕ್ಕೆ ಪ್ರಕಟವಾಗಿರುವ ಪಾಕಿಸ್ತಾನ ಟೆಸ್ಟ್ ತಂಡ ಹೀಗಿದೆ
ಶಾನ್ ಮಸೂದ್ (ನಾಯಕ), ಆಮಿರ್ ಜಮಾಲ್, ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹ್ಮದ್, ಬಾಬರ್ ಆಝಮ್, ಫಹೀಮ್ ಅಶ್ರಫ್, ಹಸನ್ ಅಲಿ, ಇಮಾಮ್ ಉಲ್ ಹಕ್, ಖುರ್ರಂ ಶಹಜಾದ್, ಮೀರ್ ಹಮ್ಜಾ, ಮೊಹಮ್ಮದ್ ರಿಜ್ವಾನ್ (ವಿಕೆಟ್ಕೀಪರ್), ಮೊಹಮ್ಮದ್ ವಸೀಮ್ ಜೂನಿಯರ್, ನೋಮನ್ ಅಲಿ, ಸೈಮ್ ಅಯೂಬ್, ಸಲ್ಮಾನ್ ಅಲಿ ಆಘ, ಸರ್ಫರಾಝ್ ಅಹಮದ್ (ವಿಕೆಟ್ಕೀಪರ್), ಸೌದ್ ಶಕೀಲ್, ಶಾಹೀನ್ ಶಾ ಆಫ್ರಿದಿ.
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಈಗ ಹಲವು ಬದಲಾವಣೆಗಳಾಗಿವೆ. ಮುಖ್ಯ ಕೋಚ್ ಹಾಗೂ ಕ್ರಿಕೆಟ್ ಡೈರೆಕ್ಟರ್ ಆಗಿ ಮೊಹಮ್ಮದ್ ಹಫೀಝ್ ನೇಮಕಗೊಂಡಿದ್ದಾರೆ. ಇದರ ಬೆನ್ನಲ್ಲೇ ಮಾಜಿ ವೇಗಿ ಉಮರ್ ಗುಲ್ ಮತ್ತು ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್ ಅವರನ್ನು ತಂಡದ ಬೌಲಿಂಗ್ ಕೋಚ್ಗಳನ್ನಾಗಿ ಆಯ್ಕೆ ಮಾಡಲಾಗಿದೆ