ಬೆಂಗಳೂರು: ಬಿಹಾರದ ಜಾತಿಗಣತಿ ವರದಿ ಬಿಡುಗಡೆಯಾದ್ಮೇಲೆ ರಾಜ್ಯದಲ್ಲಿ ಜಾತಿ ವಾರ್ ದೊಡ್ಡಮಟ್ಟದಲ್ಲಿ ಸೌಂಡ್ ಮಾಡ್ತಿದೆ. ಈಗಾಗ್ಲೆ ಒಕ್ಕಲಿಗ ಸಂಘಟನೆಯಿಂದ ವರದಿಗೆ ದೊಡ್ಡ ಮಟ್ಟದ ಆಕ್ರೋಶ ವ್ಯಕ್ರವಾಗ್ತಿದ್ರೆ, ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಗಣತಿ ವರದಿ ಬೇಡ ಅಂತಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ವರದಿ ಪಡೆದೇ ತೀರುತ್ತೇನೆ ಅನ್ನೋ ಹಠಕ್ಕೆ ಬಿದ್ದಿದ್ದು. ವಿಪಕ್ಷಗಳಿಂದಲೂ ಭಾರೀ ವಿರೋಧ ವ್ಯಕ್ತವಾಗ್ತಿದೆ, ಈ ಮಧ್ಯೆ ವರದಿಯ ಮೂಲ ಪ್ರತಿಯೇ ಕಾಣೆಯಾಗಿರೋದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.…..
2015 ರ ಕಾಂತರಾಜು ವರದಿಯ ಮೂಲ ಪ್ರತಿ ಕಳ್ಳತನ ವಾಗಿದೆ ಎಂಬ ಮಾಹಿತಿಗಳು ಹರಿದಾಡ್ತಿದ್ದು ಇದಕ್ಕೆ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸ್ಪಷ್ಟನೆ ಕೊಟ್ಟಿದ್ದಾರೆ. ಹಿಂದೆ ಸಿದ್ದಪಡಿಸಿದ್ದ ಮೂಲ ಪ್ರತಿ ನಮ್ಮ ಬಳಿ ಇಲ್ಲ ಆದ್ರೆ ಡೇಟಾ ಎಲ್ಲವೂ ಇದೆ ಯಾವುದು ಮಿಸ್ ಅಗಿಲ್ಲ ಸಾಪ್ಟ್ ವೇರ್ ನಲ್ಲೂ ಇದೆ. ಪ್ರತಿ ಜಿಲ್ಲಾಧಿಕಾರಿಗಳ ಬಳಿಯೂ ಡೆಟಾ ಇದೆ ಅದೊಂದು ವಿಷಯವೇ ಅಲ್ಲ ವಿವಾದವೂ ಅಲ್ಲಾ. ಡೇಟಾ ಆಧರಿಸಿ ನಾವು ವರದಿ ಸಿದ್ದಪಡಿಸುತ್ತೇವೆ ಸಿದ್ದಪಡಿಸು ಪ್ರಕ್ರಿಯೆ ನಡೆಯುತ್ತಿದ್ದು ಡಿಸೆಂಬರ್ ಅಂತ್ಯದ ವೇಳೆಗೆ ಸರ್ಕಾರಕ್ಕೆ ಪರಿಷ್ಕೃತ ವರದಿ ಸಲ್ಲಿಸುತ್ತೇವೆ ಎಂದಿದ್ದಾರೆ ಹೆಗ್ಡೆ…
ಜಾತಿಗಣತಿ ವರದಿ ಜಾರಿಯಾದ್ಮೇಲೆ ರಾಜ್ಯದಲ್ಲಿ ಜಾತಿಗಣತಿ ವರದಿ ಯಾವಾಗ ಅನ್ನೋ ಒತ್ತಾಯಗಳು ಕೇಳಿಬಂದಿದ್ದವು. ಇದಕ್ಕೆ ಪುಷ್ಠಿ ಎಂಬಂತೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಜಯಪ್ರಕಾಶ್ ಹೆಗ್ಡೆ ವರದಿ ಸಿದ್ದವಿದೆ ಸರ್ಕಾರ ಕೇಳಿದ್ರೆ ಕೊಡ್ತೀವಿ ಎಂದಿದ್ರು.
ಸಿಎಂ ಸಿದ್ದರಾಮಯ್ಯ ಸಹ ವರದಿ ಪಡಿತೇವೆ ಎಂದಿದ್ರು, ಈ ಮಧ್ಯೆ ವರದಿಯ ಮಾಹಿತಿ ಲೀಕ್ ಆಗಿ ಕೆಲವೊಂದಷ್ಟು ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಿ ರಾಜಕೀಯ ಸ್ವರೂಪ ಪಡೆದಿತ್ತು. ಅದ್ರಲ್ಲೂ ರಾಜ್ಯದ ಪ್ರಬಲ ಸಮುದಾಯಗಳಲ್ಲಿ ಒಂದಾದ ಒಕ್ಕಲಿಗ ಸಮುದಾಯ ತೀವ್ರವಾಗಿ ವಿರೋಧಿಸಿತ್ತು ಸಿಎಂ ವರದಿ ಪಡೆಯದಂತೆ ಪತ್ರವನ್ನು ಕೊಟ್ಟಿತ್ತು ಈ ಪತ್ರಕ್ಕೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಸಹಿ ಮಾಡಿದ್ದಾರೆ…
ಇನ್ನು ಈ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಜಾತಿ ಗಣತಿ ಸೋಷಿಯಲ್ ಇಂಪ್ಯಾಕ್ಟ್ ಮಾಡಬೇಕು ಅನ್ನೋದು ನಮ್ಮ ಕಾಂಗ್ರೆಸ್ ಪಕ್ಷದ ನಿಲುವು.
ಅವರವರ ಸಮುದಾಯದವನ್ನ ಉಳಿಸಿಕೊಳ್ಳಲು ನಾಯಕರು ಪಾರ್ಟಿ ಪಕ್ಷ ಧರ್ಮ ಎಲ್ಲಾ ಬಿಟ್ಟು ಹೋರಾಡುತ್ತಿದ್ದಾರೆ, ಹಾಗೆ ಒಕ್ಕಲಿಗರು ಹೋರಾಡುತ್ತಿದ್ದಾರೆ ತಪ್ಪೇನು. ನಾನು ಸಹಿ ಮಾಡುವುದು ತಪ್ಪಾ ರಾಜಕಾರಣ ಏನೇ ಇರಲಿ ನಮ್ಮ ಸಮಾಜ ಉಳಿಸಿಕೊಳ್ಳಬೇಕು ಅನ್ನೋದು ಎಲ್ಲರಿಗೂ ಇದ್ದೇ ಇರುತ್ತೆ ಅನ್ನೋ ಮೂಲಕ ಅತಿ ಗಣತಿ ವರದಿಯನ್ನ ವಿರೋಧಿಸಿದ್ದಾರೆ ಡಿಕೆಶಿ….
ಜಾತಿ ವರದಿಯನ್ನ ಒಕ್ಕಲಿಗ ಸಮುದಾಯದ ಮತ್ತೊಬ್ಬ ನಾಯಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಹ ವಿರೋಧಿಸಿದ್ದಾರೆ. ಅವರಿಗೆ ಬೇಕಾದ ಹಾಗೇ ವರದಿ ಸಿದ್ದವಾಗಿರುವುದು ಜಗಜ್ಜಾಹಿರಾಗಿದೆ, ರಾಷ್ಟ್ರೀಯ ನಾಯಕರನ್ನ ಮೆಚ್ಚಿಸಲು ಈಗ ವರದಿ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಕಾಂತರಾಜು ಕಮಿಟಿ ರಚನೆ ಮಾಡಿ 10 ವರ್ಷ ಕಳೆದಿದೆ
ಈ ಹತ್ತು ವರ್ಷಗಳಲ್ಲಿ ಹಲವಾರು ಬೆಳವಣಿಗೆ ಆಗಿದೆ.
ಮನೆಯಲ್ಲಿ ಕುಳಿತು ಬರೆದರೋ ಇಲ್ಲಾ ಆಗಿನ ಸಿಎಂ ಬರೆಸಿದರೋ ಗೊತ್ತಿಲ್ಲ. ಸಮಾಜ ಒಡೆಯುವುದು ಕಾಂಗ್ರೆಸ್ ಸರ್ಕಾರದ ಉದ್ದೇಶ, ಸಮಾಜವನ್ನ ವಿಶ್ವಾಸ ತೆಗೆದುಕೊಳ್ಳುವುದು ಇವರಿಗೆ ಬೇಕಿಲ್ಲ ಅಂತ ಕಿಡಿ ಕಾರಿದ್ದಾರೆ ಮಾಜಿ ಸಿಎಂ…
ಮಾಜಿ ಸಚಿವ ಅಶ್ವಥ್ ನಾರಾಯಣ ಸಹ ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಜಾತಿ ಜನಗಣತಿ ವರದಿ ರಾಜಕೀಯ ಪ್ರೇರಿತವಾಗಿದೆ. ಅದನ್ನು ಸರ್ಕಾರ ಸದುದ್ದೇಶದಿಂದ ಪಡೆಯುತ್ತಿಲ್ಲ ವರದಿ ಅವೈಜ್ಞಾನಿಕವಾಗಿದೆ. ಈ ಸಮೀಕ್ಷೆ ಸರಿಯಾಗಿ ಆಗಿಲ್ಲ ಅಂತ ಪ್ರತಿಯೊಬ್ಬರೂ ಹೇಳ್ತಿದ್ದಾರೆ, ನಾವು ಈ ವರದಿಯಯನ್ನು ವಿರೋಧಿಸುತ್ತೇವೆ. ಸಿದ್ದರಾಮಯ್ಯ ಸ್ವಾರ್ಥ ರಾಜಕಾರಣ ಮಾಡ್ತಿದ್ದಾರೆ ರಾಹುಲ್ ಗಾಂಧಿಯವ್ರು ಹೇಳಿದ್ರು ಅಂತ ವರದಿ ಮೇಲೆ ರಾಜಕೀಯ ಮಾಡ್ತಿದ್ದಾರೆ ಅಂತ ಆರೋಪಿಸಿದ್ದಾರೆ….
ಈ ಎಲ್ಲಾ ಆರೋಪಗಳಿಗೆ ಸಿಎಂ ಸಿದ್ದರಾಮಯ್ಯ ಠಕ್ಕರ್ ಕೊಟ್ಟಿದ್ದು ವರದಿ ಇನ್ನು ಬಂದೇ ಇಲ್ಲ ಆಗಲೇ ವಿರೋಧ ಅಂದರೆ ಹೇಗೆ. ವರದಿ ಇನ್ನು ನಮ್ಮ ಕೈಗೆ ಕೊಟ್ಟಿಲ್ಲ ವರದಿ ಕೊಟ್ಟ ಮೇಲೆ ನೋಡೋಣ.
ವರದಿ ಕೊಟ್ಟ ಮೇಲೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡ್ತೀವಿ
ಒಕ್ಕಲಿಗ ಸಮುದಾಯದವರು ವರದಿ ನೋಡಿಲ್ಲ
ವರದಿಯಲ್ಲಿ ಏನಿದೆ ಯಾರಿಗೂ ಗೊತ್ತಿಲ್ಲ. ಅವರು ಡಿಸೆಂಬರ್ ನಲ್ಲಿ ಕೊಡ್ತೀನಿ ಅಂತ ಹೇಳಿದ್ದಾರೆ
ಡಿಸೆಂಬರ್ ಅಥವಾ ಜನವರಿ ಒಳಗೆ ವರದಿ ಕೊಡಿ ಅಂತ ಹೇಳಿದ್ದೇನೆ ಎಂದಿದ್ದಾರೆ ಸಿಎಂ ಸಿದ್ದು…
ಒಟ್ನಲ್ಲಿ ಸದ್ಯ ತಯಾರಾಗಿರೋ ವರದಿ ವೈಜ್ಞಾನಿಕವೋ, ಅವೈಜ್ಞಾನಿಕವೋ ಎಲ್ಲವೂ ಇನ್ನು ನಿಗೂಡ. ಆದ್ರೆ ಮೂಲ ಪ್ರತಿ ಕಾಣೆಯಾಗಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಡ್ತಿದೆ ಸದ್ಯ ಒಕ್ಕಲಿಗ ಸಮುದಾಯದ ಬೆಂಬಲಕ್ಕೆ ಸ್ವತಃ ಡಿಸಿಎಂ ನಿಂತಿರೋದ್ರಿಂದ ಎಲ್ಲೋ ಒಂದು ಕಡೆ ಸರ್ಕಾರಕ್ಕೆ ಮುಜುಗರ ತಂದೊಡ್ಡಿದೆ. ಹಲವರ ವಿರೊಧದ ಮಧ್ಯೆ ವರದಿ ಪಡೆಯಲು ಸಿದ್ದು ಹಠಕ್ಕೆ ಬಿದ್ದಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ ಜಾತಿ ವರದಿ ಸಿದ್ದು ಕೈ ಸೇರಲಿದ್ದು ಆಮೇಲೆ ಆಗೋ ವಾಕ್ಸಮರಗಳಿಗೆ ವೇದಿಕೆ ಈಗಿನಿಂದಲೇ ಸಿದ್ಧವಾಗ್ತಿದೆ…..