ಬೆಂಗಳೂರು: ಸರ್ಕಾರದಲ್ಲಿ ಭುಗಿಲೆದ್ದಿರುವ ಅಸಮಧಾನ ಶಮನ ಮಾಡಿಸಲು,ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲು ಸರ್ಕಾರ ಮುಂದಾಗಿದೆ.ನಿನ್ನೆ ತಡರಾತ್ರಿಯವರೆಗೂ ಸಿಎಂ,ಡಿಸಿಎಂ ಜೊತೆ ಸುರ್ಜೆವಾಲಾ ಕ್ಲೋಸ್ ಡೋರ್ ಸಭೆ ನಡೆಸಿದ್ರು.ಸಭೆಯಲ್ಲಿ ಮೊದಲ ಹಂತದಲ್ಲಿ 25 ಶಾಸಕರಿಗೆ ಅಧಿಕಾರ ನೀಡುವ ಬಗ್ಗೆ ತೀರ್ಮಾನ ಆಗಿದ್ದು,ಶಾಸಕರ ಅಸಮಧಾನಕ್ಕೆ ಟಾನಿಕ್ ನೀಡಲು ನಾಯಕರು ಮುಂದಾಗಿದೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನವನ್ನ ಗೆಲ್ಲಬೇಕೆಂದು ಹೊರಟಿರುವ ಕಾಂಗ್ರೆಸ್ ನಾಯಕರಿಗೆ,ಕಾಂಗ್ರೆಸ್ ಶಾಸಕರ ಅಸಮಧಾನವೇ ದೊಡ್ಡ ತಲೆನೋವಾಗಿದೆ.ಈ ಹಿನ್ನಲೆಯಲ್ಲಿ ಶಾಸಕರ ಅಸಮಧಾನಕ್ಕೆ ಬ್ರೇಕ್ ಹಾಕಲು,ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲು ಸರ್ಕಾರ ಮುಂದಾಗಿದೆ.ನಿನ್ನೆ ತಡರಾತ್ರಿಯವರೆಗೂ ಸಿಎಂ,ಡಿಸಿಎಂ ಜೊತೆ ಸುರ್ಜೆವಾಲಾ ಸಭೆ ನೆಡಸಿದ್ರು.ಸಭೆಯಲ್ಲಿ ಮೊದಲ ಹಂತದಲ್ಲಿ 25 ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲು ತೀರ್ಮಾನಿಸಲಾಗಿದೆ.ಆದ್ರೆ,ಈ ತೀರ್ಮಾನಕ್ಕೆ ಕೆಲ ಹಿರಿಯ ನಾಯಕರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮತ್ತೊಂದು ಸುತ್ತಿನ ಸಭೆ ಇದೇ ತಿಂಗಳು 28ರಂದು ನಡೆಸಲು ತೀರ್ಮಾನಿಸಲಾಗಿದೆ.
ಇನ್ನು ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲಿತ ಶಾಸಕರಿಗೆ ಮಾತ್ರ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲಾಗುತ್ತಿದೆ ಎಂಬ ಚರ್ಚೆಗೆ,ಗೃಹ ಸಚಿವ ಜಿ.ಪರಮೇಶ್ವರ್ ಅಸಮಧಾನ ವ್ಯಕ್ತಪಡಿಸಿದ್ರು.ಈ ಹಿನ್ನಲೆಯಲ್ಲಿ ಸಿಎಂ ಕಾವೇರಿ ನಿವಾಸಕ್ಕೆ ಇಂದು ಬೆಳಿಗ್ಗೆ ದೌಡಯಿಸಿದ ಜಿ.ಪರಮೇಶ್ವರ್ ತಮ್ಮ ಬೆಂಬಲಿಗರಿಗೆ ಸ್ಥಾನ ನೀಡುವಂತೆ ಒತ್ತಡ ಹಾಕಿದ್ದಾರೆ.ಸಭೆ ಬಳಿಕ ಪರಮೇಶ್ವರ್ ಗೆ ಯಾವುದೇ ಅಸಮಧಾನ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇನ್ನು ಅಸಮಾಧಾನಗೊಂಡ ಶಾಸಕರನ್ನ ವಿಶ್ವಾಸಕ್ಕೆ ತೆಗದುಕೊಳ್ಳಲು ನಿನ್ನೆ ಖುದ್ದು ಸುರ್ಜೆವಾಲಾ ಕೆಲ ಶಾಸಕರ ಜೊತೆ ದೂರವಾಣಿ ಮಾತನಾಡಿ,ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದರು. ಇನ್ನು ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.ಇನ್ನು ನಿಗಮ ಮಂಡಳಿಗೆ ರೇಸ್ ನಲ್ಲಿ ಯಾರ್ಯಾರು ಶಾಸಕರು ಇದ್ದಾರೆ ಅನ್ನೋದನ್ನ ನೋಡೋದಾದ್ರೆ..
ಎಂ.ಕೃಷ್ಣಪ್ಪ- ವಿಜಯನಗರ ಕ್ಷೇತ್ರ
ಹ್ಯಾರೀಸ್,ಶಾಂತಿನಗರ ಕ್ಷೇತ್ರ
ಬಿ.ಆರ್.ಪಾಟೀಲ್,ಆಳಂದ ಕ್ಷೇತ್ರ
ವಿನಯ್ ಕುಲಕರ್ಣಿ,ಧಾರವಾಡ ಕ್ಷೇತ್ರ
ವಿಜಯಾನಂದ ಕಾಶಪ್ಪ,ಹುನಗುಂದ ಕ್ಷೇತ್ರ
ನರೇಂದ್ರ ಸ್ವಾಮಿ,ಮಳವಳ್ಳಿ ಕ್ಷೇತ್ರ
ನಂಜೇಗೌಡ,ಮಾಲೂರು ಕ್ಷೇತ್ರ
ಬಿ.ಕೆ.ಸಂಗಮೇಶ್,ಭದ್ರಾವತಿ ಕ್ಷೇತ್ರ
ಬೇಳೂರು ಗೋಪಾಲಕೃಷ್ಣ,ಸಾಗರ ಕ್ಷೇತ್ರ
ಬಿಜಿ ಗೋವಿಂದಪ್ಪ,ಹೊಸದುರ್ಗ ಕ್ಷೇತ್ರ
ಪ್ರಸಾದ್ ಅಬ್ಬಯ್ಯ,ಹು-ಧಾ ಪೂರ್ವ ಕ್ಷೇತ್ರ
ಶಿವಲಿಂಗೇಗೌಡ,ಅರಸೀಕೆರೆ ಕ್ಷೇತ್ರ
ರಘುಮೂರ್ತಿ,ಚಳ್ಳಕೆರೆ ಕ್ಷೇತ್ರ
ರಾಜೇಗೌಡ,ಶೃಂಗೇರಿ ಕ್ಷೇತ್ರ
ನಾರಾಯಣಸ್ವಾಮಿ,ಬಂಗಾರಪೇಟೆ ಕ್ಷೇತ್ರ
ರಾಘವೇಂದ್ರ ಹಿಟ್ನಾಳ್,ಕೊಪ್ಪಳ ಕ್ಷೇತ್ರ
ಒಟ್ನಲ್ಲಿ,ಸಚಿವ ಸ್ಥಾನದ ಆಕಾಂಕ್ಷಿಗಳು ಹಾಗು ಅಸಮಧಾನಿತ ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ-ಮಾನ ನೀಡುವ ಮೂಲಕ,ಶಾಸಕರ ಅಸಮಧಾನ ಶಮನ ಮಾಡಲು ಸರ್ಕಾರ ಮುಂದಾಗಿದೆ.ಇದು ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.