ಕೆಪಿಎಸ್ಸಿ ಮೂಲಕ ಸದ್ಯದಲ್ಲೇ 3000 ಸರ್ಕಾರಿ ಹುದ್ದೆಗೆ ಅಧಿಸೂಚನೆ ಬಿಡುಗಡೆ ಆಗಲಿದೆ ಎಂಬುದನ್ನು ಹುದ್ದೆಗಳ ವಿವರ ಸಹಿತ ವಿಕ’ದಲ್ಲಿ ಇತ್ತೀಚೆಗೆ ತಿಳಿಸಲಾಗಿತ್ತು. ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಹ ವಿವಿಧ ಇಲಾಖೆಗಳ ಹುದ್ದೆಗಳಿಗೆ ಅತಿ ಶೀಘ್ರದಲ್ಲೇ ನೇಮಕ ಅಧಿಸೂಚನೆ ಹೊರಡಿಸುವ ಕುರಿತ ಮಾಹಿತಿ ಹೊರಬಿದ್ದಿದೆ.
ಹೌದು, ಕೆಇಎ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದೆ. ಸಾರಿಗೆ ಇಲಾಖೆ, ಪಶು ವೈದ್ಯಕೀಯ ಇಲಾಖೆ, ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್ಜಿಯುಹೆಚ್ಎಸ್), ನಗರಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಂದಾಜು 400 ಕ್ಕೂ ಹೆಚ್ಚು ಪೋಸ್ಟ್ಗಳಿಗೆ ಡಿಸೆಂಬರ್ ಮೊದಲ ವಾರವೇ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ದೊರೆತಿದೆ.
455 ಪೊಲೀಸ್ ಸಬ್ಇನ್ಸ್ಪೆಕ್ಟರ್ ಹುದ್ದೆಗಳಿಗೂ ಸಹ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ಅಧಿಸೂಚಿಸಿ, ನೇಮಕ ಪ್ರಕ್ರಿಯೆ ನಡೆಸಲಿದೆ.
ವಿವಿಧ ಇಲಾಖೆಗಳ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ವಿವಿಧ ವಿಭಾಗಗಳ ಇಂಜಿನಿಯರ್, ಆಪ್ತ ಸಹಾಯಕ ಸೇರಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.