ಬೆಂಗಳೂರು: ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಇಂದು ದೆಹಲಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತೆರಳಲಿದ್ದಾರೆ. ಈ ನಾಯಕರ ಭೇಟಿಗೆ ಕೇಂದ್ರ ವಿತ್ತ ಸಚಿವರು ಇಂದು ಸಮಯ ನೀಡಿದ್ದಾರೆ. ಒಂದು ವಾರದೊಳಗೆ ಬರ ಪರಿಹಾರ ಘೋಷಣೆ ಮಾಡುವ ನಿರೀಕ್ಷೆಯನ್ನು ಸಚಿವರು ಹೊಂದಿದ್ದಾರೆ,
ತಮಿಳುನಾಡಿಗೆ ನೀರು ಹರಿಸುವಂತೆ ನೀಡಿದ್ದ ಆದೇಶದ ಅವಧಿ ಮುಕ್ತಾಯ ಹಿನ್ನೆಲೆ ಇಂದು ದೆಹಲಿಯಲ್ಲಿ ಮತ್ತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಸಲಿದೆ. ಮುಂದಿನ ಅವಧಿಗೆ ನೀರು ಹರಿಸಬೇಕೇ ಬೇಡವೇ ಎಂಬುದರ ಬಗ್ಗೆ ಬೆಳಗ್ಗೆ 11.30ಕ್ಕೆ ಸಿಡಬ್ಲ್ಯುಆರ್ಸಿ ಸಭೆ ನಡೆಯಲಿದೆ.