ಬೆಂಗಳೂರು:- ಹೋಗು ಅಂದರೆ ಹೋಗೋಕೆ ತಾಳಿ ಕಟ್ಟಿದ ಹೆಂಡತಿ ನಾನಲ್ಲ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಟಿ.ಎ.ಶರವಣ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲು ಹಣ ತೆಗೆದುಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ಮಾಡಿ ಹೇಳಲಿ ಎಂದು ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸವಾಲು ಹಾಕಿದ್ದಾರೆ. ಅಲ್ಲದೆ, ಧೈರ್ಯ ಇದ್ದರೆ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಗೆದ್ದು ಬರಲಿ ಎಂದರು.
ಶರವಣ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಲು ಹಣ ತೆಗೆದುಕೊಂಡಿಲ್ಲ ಅಂತ ಮಗನ ತಲೆ ಮೇಲೆ ಕೈ ಇಟ್ಟು ಆಣೆ ಮಾಡ್ತೀರಾ ಕುಮಾರಸ್ವಾಮಿ ಅವರೇ. ಧೈರ್ಯ ಇದೆಯಾ ನಿಮಗೆ ಆಣೆ ಮಾಡೋಕೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ. ಅಶೋಕ್ ಪ್ರತಿಪಕ್ಷದ ನಾಯಕ. ಅವರ ಮುಂದೆ ಹೋಗಿ ನಿಲ್ಲುತ್ತೀರಾ? ಎರಡು ಸೀಟಿಗೋಸ್ಕರ ಅಮಿತ್ ಶಾ ಮುಂದೆ ದೇವೇಗೌಡ ಹೋಗಿ ನಿಂತುಕೊಳ್ಳಬೇಕಿತ್ತಾ? ತೆನೆ ಹೊತ್ತ ಮಹಿಳೆಯನ್ನು ಯಾರ ಯಾರ ಹತ್ತಿರ ಕರೆದುಕೊಂಡು ಹೋಗ್ತೀರಿ? ಚನ್ನಪಟ್ಟಣದಲ್ಲಿ 20 ಸಾವಿರ ಮುಸ್ಲಿಂ ಮತ ಪಡೆದು ಗೆದ್ದಿರಲ್ಲ, ಅದು ಯಾರ ಮುಖ ನೋಡಿ ಬಂತು ಎಂದು ಹರಿಹಾಯ್ದರು.