ಬೆಳಗಾವಿ:- ಹೊಂಡದಲ್ಲಿ ಬಿದ್ದು 12 ವರ್ಷದ ಬುದ್ಧಿಮಾಂದ್ಯ ಬಾಲಕ ಸಾವನ್ನಪ್ಪಿದ ಘಟನೆ ಜರುಗಿದೆ.
ಅಥಣಿ ತಾಲೂಕಿನ ಮದಭಾವಿ ಗ್ರಾಮದ ಅಂಧ ಮಕ್ಕಳ ಶಾಲೆಯಾದ ಶಾರದಾದೇವಿ ಬುದ್ದಿ ಮಾಂದ್ಯ ಮಕ್ಕಳ ಶಾಲೆ ಹಾಗು ವಸತಿಯುತ ವಿಶೇಷ ಶಾಲೆಯ ಸುದೀಪ್ ತಮ್ಮಣ್ಣಿ ಮಾನೆ ಎಂಬ ಬಾಲಕ ಸಾವನಪ್ಪಿದಾನೆ ಎಂದು ತಿಳಿದು ಬಂದಿದೆ.
ದಿನಾಂಕ 21/11/2023 ರಂದುದು ಮುಂಜಾನೆ ಹೊರಗೆ ಹೋದ ಬಾಲಕ ಮರಳಿ ಶಾಲೆಗೆ ಬಂದಿಲ್ಲ ಶಿಕ್ಷಕರು ಹಾಗೂ ಶಾಲೆಯ ಸಿಬ್ಬಂದಿಗಳು ಬಾಲಕನನ್ನು ಹುಡುಕಾಡಿದರು ಸಿಕ್ಕಿರುದಿಲ್ಲ. ಮರುದಿನ ಅಂದರೇ ದಿನಾಂಕ್ 22/11/2023 ರಾಂಡು ಶಾಲೆಯ ಸಮೀಪದಲ್ಲಿ ಇರುವ ಒಂದು ಬಾಳೆ ತೋಟದ ಹೊಂಡಲ್ಲಿ ಬಾಲಕ ಮೃತ್ಯುವಾಗಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.