ಬೆಂಗಳೂರು: ಇನ್ಮುಂದೆ ಗಾಡಿ ಟಚ್ ಆಯ್ತು ರಸ್ತೆಯಲ್ಲಿ ಗಲಾಟೆ ಮಾಡೋ ಮುನ್ನ ಸ್ವಲ್ಪ ಹುಷಾರಾಗಿರಿ. ಯಾಕಂದ್ರೆ ಯಾರು ಹೇಗೆ ಬೆಹೆವ್ ಮಾಡ್ತಾರೋ ಆ ದೇವರಿಗೆ ಗೊತ್ತು. ಹೀಗೆ ಎರಡು ಬೈಕ್ ಗಳ ನಡುವೆ ನಡೆದ ಸಣ್ಣ ಅಪಘಾತ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಹಾಗಾದ್ರೆ ಆ ಬೈಕ್ ಸವಾರರ ನಡುವೆ ಏನಾಯ್ತು ಅಂತೀರಾ ಈ ಸ್ಟೋರಿ ನೋಡಿ…
ಹೌದು… ಸಿಲಿಕಾನ್ ಸಿಟಿ ರಸ್ತೆಗಳಲ್ಲಿ ಸಣ್ಣ ಪುಟ್ಟ ಆಕ್ಸಿಡೆಂಟ್ ಗಳು ಸರ್ವೇ ಸಾಮಾನ್ಯವಾಗಿವೆ. ಬೈಕ್, ಕಾರು, ಆಟೋಗಳು ಟಚ್ ಮಾಡ್ಕೊಂಡು ಸವಾರರು ರಸ್ತೆಯಲ್ಲೆ ಗಲಾಟೆ ಮಾಡ್ಕೊತಾರೆ. ಇದೇ ರೀತಿ ಎರಡು ಬೈಕ್ ಗಳ ನಡುವೆ ಸಣ್ಣ ಅಪಘಾತವಾಗಿದ್ದು, ಇಬ್ಬರು ಸವಾರರು ರಸ್ತೆಯಲ್ಲಿ ಗಲಾಟೆ ಮಾಡಿಕೊಂಡಿದ್ರು. ಅದ್ರೆ ಇಬ್ಬರ ನಡುವಿನ ಗಲಾಟೆ ತಾರಕಕ್ಕೇರಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಹೀಗೆ ಬೈಕ್ ಗಲಾಟೆಯಲ್ಲಿ ಕೊಲೆಯಾದ ವ್ಯಕ್ತಿ ಈತನೇ ನೋಡಿ ಹೆಸರು.. ಕೃಷ್ಣಪ್ಪ…
ನಗರದ ವೈಯಾಲಿ ಕಾವಲ್ ನಿವಾಸಿಯಾದ ಕೃಷ್ಣಪ್ಪ ಬಿಪಿ ಮತ್ತು ಶುಗರ್ ನಿಂದ ಬಳಲುತ್ತಿದ್ರು. ಮನೆಯಲ್ಲಿದ್ದ ಮಾತ್ರೆ ಖಾಲಿಯಾಗಿದೆ ಅಂತಾ ನವೆಂಬರ್ 15 ರ ರಾತ್ರಿ 8.30 ರ ಸುಮಾರಿಗೆ ಬೈಕ್ ನಲ್ಲಿ ಮೆಡಿಕಲ್ ಸ್ಟೋರ್ ಗೆ ಹೊರಟಿದ್ರು. ವೈಯಾಲಿಕಾವಲ್ ನ ಕೆಂಪಣ್ಣ ಲೇಔಟ್ ಬಳಿ ಕೃಷ್ಣಪ್ಪ ಅವರ ಬೈಕ್ ಗೆ ಸರ್ಫರಾಜ್ ಖಾನ್ ಎಂಬಾತ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಆಯಾ ತಪ್ಪಿ ಕೃಷ್ಣಪ್ಪ ನೆಲದ ಮೇಲೆ ಬಿದ್ದಿದ್ದಾರೆ. ನಂತರ ಬೈಕ್ ಸವಾರನಿಗೆ ನೋಡ್ಕೊಂಡು ಬರೋಕೆ ಆಗಲ್ವಾ ಅಂತಾ ಕೃಷ್ಣಪ್ಪ ಬೈದು ಬುದ್ದಿ ಹೇಳಿದ್ದಾರೆ. ಇಷ್ಟಕ್ಕೆ ಕುಪಿತಗೊಂಡ ಮತ್ತೊಂದು ಬೈಕ್ ಸವಾರ ಸರ್ಫರಾಜ್ ಖಾನ್, ರಸ್ತೆ ಬದಿಯಿದ್ದ ಕಲ್ಲಿನಿಂದ ಕೃಷ್ಣಪ್ಪ ತಲೆ ಹೊಡೆದು ಎಸ್ಕೇಪ್ ಆಗಿದ್ದಾನೆ.
ನಂತರ ಅಲ್ಲಿದ್ದ ಸ್ಥಳೀಯರು ಅಪಘಾತವಾಗಿದೆ ಅಂತಾ ಗಾಯಾಳು ಕೃಷ್ಣಪ್ಪನನ್ನ ಅಸ್ಪತ್ರೆಗೆ ದಾಖಲು ಮಾಡಿದ್ದಾರೆ. ಎರಡು ದಿನಗಳ ನಂತರ ಗಾಯಾಳು ಕೃಷ್ಣಪ್ಪ ಅಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಅದ್ರೆ ಕೃಷ್ಣಪ್ಪ ಮಗ ಸತೀಶ್ ತಲೆಯಲ್ಲಿ ತಂದೆಯ ಸಾವಿನ ಬಗ್ಗೆ ಸಣ್ಣ ಅನುಮಾನ ಮೂಡಿತ್ತು. ಯಾಕಂದ್ರೆ ತನ್ನ ತಂದೆ ಓಡಿಸುತ್ತಿದ್ದ ಬೈಕ್ ಗೆ ಸಣ್ಣ ಡ್ಯಾಮೇಜ್ ಕೂಡ ಆಗಿರಲಿಲ್ಲ. ಅದ್ರೆ ತಂದೆ ತಲೆಗೆ ಮಾತ್ರ ಗಂಭೀರ ಗಾಯವಾಗಿತ್ತು. ಅದ್ರಿಂದ ಸತೀಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ, ಈ ವೇಳೆ ಓರ್ವ ವ್ಯಕ್ತಿ ಕೃಷ್ಣಪ್ಪ ಮೇಲೆ ಹಲ್ಲೆ ಮಾಡುತ್ತಿರುವುದು ಕಂಡಿದೆ. ಕೂಡಲೇ ಪೊಲೀಸರನ್ನ ಸಂಪರ್ಕಿಸಿದ ಸತೀಶ್ ಹಲ್ಲೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿ ತನಿಖೆ ನಡೆಸಿದ ಪೊಲೀಸರು ಸರ್ಫರಾಜ್ ಖಾನ್ ನನ್ನ ಬಂಧಿಸಿದ್ದಾರೆ.
ಬಂಧಿತ ಆರೋಪಿ ಸರ್ಫರಾಜ್ ವೆಲ್ಡಿಂಗ್ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ. 15 ರಂದು ರಾತ್ರಿ ವೈಯಾಲಿ ಕಾವಲ್ ಕಡೆ ವೇಗವಾಗಿ ಬೈಕ್ ನಲ್ಲಿ ಹೋಗಿ ಕೃಷ್ಣಪ್ಪ ಬೈಕ್ ಡಿಕ್ಕಿ ಹೊಡೆದಿದ್ದನಂತೆ. ಸದ್ಯ ವೈಯಾಲಿಕಾವಲ್ ಪೊಲೀಸರು ಆಕ್ಸಿಡೆಂಟ್ ಕೇಸನ್ನ ಕೊಲೆ ಕೇಸಾಗಿ ಪರಿವರ್ತಿಸಿ ತನಿಖೆ ಕೈಗೊಂಡಿದ್ದಾರೆ. ಅದೇನೆ ಇರಲಿ ಬೈಕ್ ಟಚ್ ಆದ ಸಣ್ಣ ವಿಚಾರಕ್ಕೆ ಉಂಟಾದ ಗಲಾಟೆ ವೃದ್ದ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದ್ದು ದುರ್ದೈವವೇ ಸರಿ…
ಅಭಿಷೇಕ್ ಗೌಡ ಕ್ರೈಂ ಬ್ಯೂರೋ ಪ್ರಜಾ