ಸ್ಮಾರ್ಟ್ ಫೋನ್ಗಳು ಈಗ ಬಹುತೇಕರ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿವೆ. ಈ ಫೋನ್ಗಳು ಈಗ ಬರೀ ಕರೆ ಮಾಡುವ ಸಾಧನವಾಗಿ ಮಾತ್ರ ಉಳಿದಿಲ್ಲ. ಹಣ ಪಾವತಿ, ಹಣ ವರ್ಗಾವಣೆ, ಮನರಂಜನೆ, ಮಾಹಿತಿ ಹೀಗೆ ನಮ್ಮ ಬಹುತೇಕ ದೈನಂದಿನ ಚಟುವಟಿಕೆಗಳಿಗೆ ಸ್ಮಾರ್ಟ್ ಫೋನ್ಗಳು ಆಧಾರವಾಗಿವೆ
ಲಾವಾ ಬ್ಲೇಜ್ 5ಜಿ
ಲಾವಾ ಬ್ಲೇಜ್ 5ಜಿ ಫೋನ್ನ ಬೆಲೆ 11,999 ರೂಪಾಯಿ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ನಿಂದ ಚಾಲಿತವಾಗಿದ್ದು, 5000mAh ಬ್ಯಾಟರಿ ಹಾಗೂ 3.5 ಎಂಎಂ ಆಡಿಯೋ ಜಾಕ್ನೊಂದಿಗೆ ಬರುತ್ತದೆ.
ನೋಕಿಯಾ ಜಿ42 5ಜಿ
ನೋಕಿಯಾ ಜಿ42 5ಜಿ ಸ್ಮಾರ್ಟ್ ಫೋನ್ನ ಬೆಲೆ 12,999 ರೂಪಾಯಿ. ಇದು ಸ್ನಾಪ್ಡ್ರಾಗನ್ 480+ ಪ್ರೊಸೆಸರ್ನಿಂದ ಚಾಲಿತವಾಗಿದೆ. ಈ ಫೋನ್ ಕೂಡಾ 5000mAh ಬ್ಯಾಟರಿ ಹೊಂದಿದ್ದು, ಇದು 3.5 ಎಂಎಂ ಆಡಿಯೋ ಜಾಕ್ನೊಂದಿಗೆ ಲಭ್ಯವಿದೆ.
ಟೆಕ್ನೋ ಪೋವಾ 5 ಪ್ರೋ
ಪ್ರಸಿದ್ಧ ಟೆಕ್ನೋ ಕಂಪನಿಯ ಟೆಕ್ನೋ ಪೋವಾ 5 ಪ್ರೋ ಸ್ಮಾರ್ಟ್ಫೋನ್ 14,999 ರೂಪಾಯಿಗೆ ಸಿಗುತ್ತದೆ. ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6080 ಚಿಪ್ಸೆಟ್ನಿಂದ ಚಾಲಿತವಾಗಿದೆ. ಈ ಫೋನ್ 5000mAh ಬ್ಯಾಟರಿ ಹಾಗೂ 3.5 ಎಂಎಂ ಹೆಡ್ಫೋನ್ ಜಾಕ್ನೊಂದಿಗೆ ಸಿಗುತ್ತದೆ.
ಡ್ಮಿ ನೋಟ್ 11ಟಿ 5ಜಿ
ರೆಡ್ಮಿ ನೋಟ್ 11ಟಿ 5ಜಿ ಫೋನ್ನ ಬೆಲೆ 17,999 ರೂಪಾಯಿ. ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 810 ಚಿಪ್ಸೆಟ್ನಿಂದ ಚಾಲಿತವಾಗಿದ್ದು, ಈ ಫೋನ್ ಕೂಡಾ 5000mAh ಬ್ಯಾಟರಿ ಹಾಗೂ 3.5 ಎಂಎಂ ಹೆಡ್ಫೋನ್ ಜಾಕ್ನೊಂದಿಗೆ ಗ್ರಾಹಕರಿಗೆ ಲಭಿಸುತ್ತದೆ.
ರಿಯಲ್ ಮಿ ನರ್ಝೋ 60 5ಜಿ
ರಿಯಲ್ ಮಿ ನರ್ಝೋ 60 5ಜಿ ಫೋನ್ನ ಬೆಲೆ 17,999 ರೂಪಾಯಿ. ಈ ಫೋನ್ 6.4 ಇಂಚಿನ AMOLED ಡಿಸ್ಪ್ಲೇ ಹೊಂದಿದ್ದು, 5000mAh ಬ್ಯಾಟರಿ ಹಾಗೂ 3.5 ಎಂಎಂ ಹೆಡ್ಫೋನ್ ಜಾಕ್ನೊಂದಿಗೆ ಸಿಗುತ್ತದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎ14 5ಜಿ
ಸ್ಯಾಮ್ಸಂಗ್ ಗ್ಯಾಲಕ್ಸಿ ಎ14 5ಜಿ ಫೋನ್ನ ಬೆಲೆ 18,999 ರೂಪಾಯಿ. ಇದು 6.6 ಇಂಚಿನ ಎಫ್ಎಚ್ಡಿ ಪ್ಲಸ್ ಸೂಪರ್ ಎಲ್ಸಿಡಿ ಡಿಸ್ಪ್ಲೇ ಹೊಂದಿದೆ. ಈ ಫೋನ್ 5000mAh ಬ್ಯಾಟರಿ ಹೊಂದಿದ್ದು, ಇದು 3.5 ಎಂಎಂ ಆಡಿಯೋ ಜಾಕ್ನೊಂದಿಗೆ ಬರುತ್ತದೆ.