ಬಹುತೇಕ ಕಾಲೇಜು ಹುಡುಗ ಹುಡುಗಿಯರು ಟ್ರೆಂಡಿಯಾಗಿ ಸ್ಪೆಕ್ಸ್ ಧರಿಸಲು ಮುಂದಾಗಿದ್ದಾರೆ. ಕನ್ನಡಕ ಧರಿಸಿದರೆ ಸಾಕು ಕಣ್ಣು ಹೋಯ್ತೆ ಎಂದು ರೇಗಿಸುವ ಕಾಲವೊಂದಿತ್ತು. ಈಗ ಬಿಂಕ ಬಿಗುಮಾನಗಳನ್ನು ಬದಿಗಿಟ್ಟು ಅದನ್ನೇ ಫ್ಯಾಷನ್ಆಗಿ ಬದಲಾಯಿಸಿಕೊಂಡಿದ್ದಾರೆ. ಕಣ್ಣಿನ ತಪಾಸಣಾ ಕೇಂದ್ರಗಳು ಹಾಗೂ ಕನ್ನಡಕ ಕಂಪನಿಗಳು ಸಹ ಗ್ರಾಹಕರ ಅಭಿರುಚಿಗೆ ತಕ್ಕಂತೆ ಪೂರ್ಣ ಮತ್ತು ಅರ್ಧ ಚೌಕಟ್ಟುವುಳ್ಳ ಫ್ರೇಮ್ ಗ್ಲಾಸ್, ವೈರ್ ಫ್ರೇಮ್ಗ್ಲಾಸ್, ಪ್ಲಾಸ್ಟಿಕ್ ಫ್ರೇಮ್ ಹಾಗೂ ಲೋ ಬ್ರಿಡ್ಜ್ಗ್ಲಾಸ್, ಸಿಂಗಲ್ ಲೈನ್ಫ್ರೇಮ್ ಹಾಗೂ ಮರದ ವಿನ್ಯಾಸದಲ್ಲಿ ಕಾಣುವಂತೆ ವಿನ್ಯಾಸಗೊಳಿಸಿದ ಫ್ರೇಮ್ಗ್ಲಾಸ್ಗಳನ್ನು ಮಾರುಕಟ್ಟೆಗೆ ಬಿಟ್ಟಿವೆ.
ಯೂತ್ ಐಕಾನ್:
ವಯಸ್ಸಾದವರು ಮಾತ್ರ ಕನ್ನಡಕ ಧರಿಸಬೇಕು ಎಂಬ ಜಮಾನಕ್ಕೆ ಗುಡ್ಬೈ ಹೇಳಿ ಇಂದಿನ ಯುವಜನತೆ ಕನ್ನಡಕದ ಮೋಹಿಗಳಾಗಿ ವರ್ಷಗಳೇ ಕಳೆದಿವೆ. ವೈವಿಧ್ಯಮಯ ವಿನ್ಯಾಸ ಬೀರುವ ಸ್ಪೆಕ್ಸ್ ಮುಖದಲ್ಲಿದ್ದು, ಅವರ ಸೌಂದರ್ಯ ದುಪ್ಪಟ್ಟು ಮಾಡುತ್ತಿದೆ. ಯಾರೂ ಕೂಡ ಮೂಗು ಮುರಿಯದೇ ಕನ್ನಡಕವನ್ನು ಪ್ರೀತಿಸುತ್ತಿದ್ದಾರೆ. ಅದೇ ಈಗ ಹೊಸದೊಂದು ಟ್ರೆಂಡ್ ಆಗಿದೆ.
ಹುಡುಗಿಯರ ಕ್ರಶ್:
ಹಿಂದೆಲ್ಲಾ ಸೋಡಾಬುಡ್ಡಿ ಎಂದು ರೇಗಿಸುತ್ತಾರೆ ಎಂಬ ಕಾರಣಕ್ಕಾಗಿಯೇ ಕಣ್ಣಿನ ಸಮಸ್ಯೆ ಇದ್ದರೂ ಕನ್ನಡಕ ಹಾಕಿಕೊಳ್ಳಲು ಸಂಕೋಚ ಪಡುತ್ತಿದ್ದ ಹೆಣ್ಣುಮಕ್ಕಳಿಗೀಗ ಕನ್ನಡಕದ ಮೇಲೆಯೇ ಕ್ರಶ್ ಹೆಚ್ಚಾಗಿದೆ. ವೈವಿಧ್ಯಮಯ ವಿನ್ಯಾಸದ ಸ್ಪೆಕ್ಸ್ ಧರಿಸಿ ತಿರುಗಾಡುತ್ತಾರೆ. ಕಾಲೇಜುಗಳಲ್ಲೂ ಇಂತಹದ್ದೇ ಟ್ರೆಂಡ್ ಹುಟ್ಟಿಕೊಂಡಿದೆ.
ಕೇಶವಿನ್ಯಾಸವೂ ಬದಲಾಗಲಿ:
ಎಲ್ಲ ರೀತಿಯ ಕನ್ನಡಕ ಎಲ್ಲ ರೀತಿಯ ಕೇಶ ವಿನ್ಯಾಸಕ್ಕೆ ಸೂಕ್ತವಾಗುವುದಿಲ್ಲ. ಅಲ್ಲದೆ ಹುಡುಗಿಯರು ರೌಂಡ್, ಸ್ಟೇರ್, ಓವೆಲ್ ಶೈಲಿಯ ಫ್ರೇಮ್ ಇರುವ ಕನ್ನಡಕವನ್ನು ಧರಿಸಿದರೆ ಬಹಳ ಆಕರ್ಷಕವಾಗಿ ಕಾಣುತ್ತಾರೆ. ಹಾಗೆಯೇ ಹುಡುಗರು ಸ್ಪೆಕ್ಸ್ಗೆ ತಕ್ಕಂತಹ ಫ್ರೀ ಹೇರ್ಸ್ಟೈಲ್ ಮಾಡಿಕೊಂಡರೆ ಸ್ಯೂಟ್ ಆಗುತ್ತದೆ. ನಿಮ್ಮ ಉಡುಗೆಯೂ ಅದಕ್ಕೆ ಮ್ಯಾಚಿಂಗ್ ಆಗುವಂತಿರಬೇಕು.
ಒಂದಿಷ್ಟು ಸಲಹೆ
- ಯಾವುದೇ ಕನ್ನಡಕ ಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಿರಿ
- ನಿಮ್ಮ ಮುಖಕ್ಕೆ ಹೋಲಿಕೆಯಾಗುವ ಸ್ಪೆಕ್ಸ್ ಆಯ್ಕೆ ಮಾಡಿಕೊಳ್ಳಿ. ಇಲ್ಲವಾದರೆ ಎಲ್ಲರ ಮುಂದೆ ಅಪಹಾಸ್ಯಕ್ಕೆ ಒಳಗಾಗುತ್ತೀರಿ.
- ಸ್ಕ್ಯಾಚ್ಪವರ್ ಇರುವ ಸ್ಪೆಕ್ಸ್ ಉಪಯೋಗಿಸಬೇಡಿ. ಇದರಿಂದ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಂಭವವಿರುತ್ತದೆ.
- ನೀವು ಫ್ಯಾಷನೇಬಲ್ ಆಗಿ ಕಾಣಬೇಕಾದರೆ ದಿನಕ್ಕೊಂದು ಪ್ರೇಮ್ ಇರುವುದನ್ನು ಉಪಯೋಗಿಸಿ.
- ನಿಮ್ಮ ಉಡುಗೆಗೆ ತಕ್ಕಂತೆ ಕಲರ್ಫುಲ್ ಕನ್ನಡಕ ಧರಿಸಿದರೆ ಮತ್ತಷ್ಟು ಅಂದವಾಗಿ ಕಾಣುತ್ತೀರಿ.