ಬೆಂಗಳೂರು:- ರಾಜಧಾನಿ ಬೆಂಗಳೂರಿನ ಜನರೇ ನೀವು ಕಾವೇರಿ ನೀರನ್ನ ಕುಡಿಯುತ್ತಿದ್ದರೆ, ಈ ಸ್ಟೋರಿ ಮಿಸ್ ಮಾಡ್ದೆ ನೋಡಿ.
ಕರುನಾಡಿನ ಜೀವನಾಡಿ ಎಂದ್ರೆ ಅದು ಕಾವೇರಿ. ಈ ಕಾವೇರಿ ನದಿಯನ್ನು ಕಲುಷಿತಗೊಳಿಸುವ ಕೆಲಸಕ್ಕೆ ಕೊಳ್ಳೇಗಾಲ ನಗರಸಭೆ ಮುಂದಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಹೊರಭಾಗದಲ್ಲಿರುವ ಒಳಚರಂಡಿ ಮತ್ತು ಕೊಳಚೆ ನೀರು ಶುದ್ದಿಕರಣ ಘಟಕದಲ್ಲಿ ನೀರು ಸರಿಯಾಗಿ ಶುದ್ಧೀಕರಣವಾಗ್ತಿಲ್ಲ. ಈ ಅಶುದ್ದ ನೀರನ್ನೂ ಕುಪ್ಪಂ ಕಾಲುವೆ ಮುಖಾಂತರ ಹರಿಯಬಿಡಲಾಗ್ತಿದೆ.
ಈ ನೀರು ರೈತರ ಜಮೀನುಗಳಿಗಳಿಗಷ್ಟೇ ಅಲ್ಲದೇ ದಾಸನಪುರ,ಹರಳೆ ಗ್ರಾಮದ ಮೂಲಕ ನೇರವಾಗಿ ಕಾವೇರಿ ನದಿಯ ಒಡಲನ್ನು ಸೇರುತ್ತಿದೆ.ಕಾವೇರಿ ಜನರ ಜೀವನಾಡಿಯಾಗಿದ್ದು,ಕಾವೇರಿ ನದಿಯ ಪಾವಿತ್ರ್ಯತೆ ಕಾಪಾಡಬೇಕಾದ ಜನಪ್ರತಿನಿಧಿಗಳು,ಅಧಿಕಾರಿಗಳ ಬೇಜವಾಬ್ದಾರಿ,ನಿರ್ಲಕ್ಷ್ಯತನದಿಂದ ಕಾವೇರಿ ಮಲಿನವಾಗ್ತಿದ್ದಾಳೆಂದು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ಇನ್ನು ಈ ಕಾವೇರಿ ನದಿ ಹಲವು ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಆಸರೆಯಾಗಿದೆ.ಪ್ರಮುಖವಾಗಿ ಮಂಡ್ಯ, ರಾಮನಗರ, ಬೆಂಗಳೂರು ಜಿಲ್ಲೆಗಳಿಗೆ ಈ ನೀರನ್ನೂ ಕುಡಿಯುವ ಉದ್ದೇಶದಿಂದ ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಈಗಾಗ್ಲೇ ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿ ಕುಡಿಯುವ ನೀರಿಗಾಗಿ ನೆರೆ ರಾಜ್ಯ ತಮಿಳುನಾಡು ಜೊತೆಗೆ ಫೈಟ್ ಮಾಡ್ತಿದ್ದೇವೆ.ಇದರ ಗಂಭೀರತೆ ಅರಿಯದ ನಗರಸಭೆ ಅಧಿಕಾರಿಗಳು ಕಲುಷಿತ ನೀರನ್ನು ಕಾವೇರಿ ನದಿಗೆ ಹರಿಬಿಟ್ಟು ಜಾಣ ಕಿವುಡುತನ ಪ್ರದರ್ಶಿಸುತ್ತಿದ್ದಾರೆ.
ಅಲ್ಲದೇ ಸ್ಥಳೀಯವಾಗಿಯೂ ಕೂಡ ಜನರಲ್ಲಿ ಈ ನೀರಿನಿಂದ ಅನಾರೋಗ್ಯ ಸಂಭವಿಸಿದೆ.ಸದ್ಯ ಕಾವೇರಿ ಪಾತ್ರದಲ್ಲಿ ನೀರು ಹರಿಯುತ್ತಿರುವುದರಿಂದ ಅದು ಕಣ್ಣಿಗೆ ಕಾಣ್ತಿಲ್ಲ.ನೀರು ಹರಿಯೋದು ನಿಂತರೆ ಮಲಮೂತ್ರದ ನೀರು ನಿಂತಿರುತ್ತೆ.ಇದರಿಂದ ಜಲಚರ,ಜಾನುವಾರುಗಳಿಗೂ ತೊಂದರೆಯಾಗಿದೆ ಅಂತಾರೆ.