ಹುಬ್ಬಳ್ಳಿ: ನಗರದ ಉಣಕಲ್ನ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ನ ಶಿಕ್ಷಕಿ ಸವಿತಾ ಸೊಬಾಗಿನ್ ಅವರು ಕರ್ನಾಟಕ ಓಪನ್ ನ್ಯಾಷನಲ್ ಮಾಸ್ಟರ್ಸ್ ಗೇಮ್ಸ್ನಲ್ಲಿ ಸಾಧನೆಗೈದು ಅಮೆರಿಕದಲ್ಲಿ ನಡೆಯಲಿರುವ ಪ್ಯಾನ್ ಅಮೆರಿಕನ್ ಮಾಸ್ಟರ್ಸ್ ಗೇಮ್ಸ್ಗೆ ಆಯ್ಕೆಯಾಗಿದ್ದಾರೆ.
60 ಮೀ. ಓಟದಲ್ಲಿ ದ್ವಿತೀಯ, ಡಿಸ್ಕಸ್ ಎಸೆತದಲ್ಲಿ ದ್ವಿತೀಯ, 4*100 ಮೀ. ಮಿಶ್ರ ರಿಲೆಯಲ್ಲಿ ದ್ವಿತೀಯ, ಜಾವೆಲಿನ್ ಎಸೆತದಲ್ಲಿ ತೃತೀಯ, 400 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ. ಇವರ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್, ಪ್ರಾಚಾರ್ಯೆ ರಜನಿ ಪಾಟೀಲ, ಮಹಾವೀರ ಉಪಾಧ್ಯೆ ಅಭಿನಂದಿಸಿದರು.