ಪ್ರಸಕ್ತ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಆತಿಥೇಯ ಟೀಮ್ ಇಂಡಿಯಾ 6 ವಿಕೆಟ್ಗಳ ಹೀನಾಯ ಸೋಲುಂಡಿತು. ಈ ಮೂಲಕ ಐಸಿಸಿ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಭಾರತ ತಂಡದ ಕನಸು ನುಚ್ಚು ನೂರಾಯಿತು. ಈ ಬಗ್ಗೆ ಮಾತನಾಡಿದ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ತಂಡ ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಮುಖ್ಯ ಕಾರಣ ತಿಳಿಸಿದ್ದಾರೆ.
ಮಂದಗತಿಯ ಪಿಚ್ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ರೋಹಿತ್ ಶಾರ್ಮ ಸಾರಥ್ಯದ ಟೀಮ್ ಇಂಡಿಯಾ 240 ರನ್ಗಳಿಗೆ ಆಲ್ಔಟ್ ಆಯಿತು. ಬಳಿಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಓಪನರ್ ಟ್ರಾವಿಸ್ ಹೆಡ್ (137) ಅವರ ಮನಮೋಹಕ ಶತಕದ ಬಲದಿಂದ ಇನ್ನು 7 ಓವರ್ಗಳು ಬಾಕಿ ಇರುವಾಗಲೇ 6 ವಿಕೆಟ್ಗಳ ಜಯ ದಾಖಲಿಸಿ ದಾಖಲೆಯ 6ನೇ ಬಾರಿ ಟ್ರೋಫಿ ಎತ್ತಿ ಹಿಡಿಯಿತು.
“ಟೀಮ್ ಇಂಡಿಯಾದ ಸೋಲಿಗೆ ಪಿಚ್ ಮುಖ್ಯ ಕಾರಣವಾಯಿತು. ಫೈನಲ್ ಪಂದ್ಯಕ್ಕೆ ಆತಿಥೇಯ ಭಾರತ ಇನ್ನು ಉತ್ತಮ ಪಿಚ್ ನಿರ್ಮಾಣ ಮಾಡಬಬೇಕಿತ್ತು. ಪಿಚ್ನಲ್ಲಿ ವೇಗ ಮತ್ತು ಬೌನ್ಸ್ ಇರಬೇಕಿತ್ತು. ಆದರೆ, ಸ್ಪಿನ್ನರ್ಗಳಿಗೆ ನೆರವಾಗಲಿ ಎಂದು ಮಂದಗತಿಯ ಪಿಚ್ ನಿರ್ಮಾಣ ಮಾಡಿ, ಅವರೇ ತೋಡಿದ ಖೆಡ್ಡಕ್ಕೆ ಬಿದ್ದರು. ಭಾರತ ತಂಡದ ಈ ರಣ ತಂತ್ರ ಸರಿಯಾದುದ್ದಾಗಿರಲಿಲ್ಲ,” ಎಂದು ಅಖ್ತರ್ ತಮ್ಮ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
“ವಿಶ್ವಕಪ್ ಟೂರ್ನಿಗಳಲ್ಲಿ ಟ್ರೋಫಿಗಳನ್ನು ಗೆಲ್ಲುತ್ತಿರುವ ಆಸ್ಟ್ರೇಲಿಯಾ ತಂಡದಲ್ಲಿ ವಿಶೇಷತೆ ಇದೆ. ಅಂದಹಾಗೆ ಭಾರತ ತಂಡ ಅದೃಷ್ಟದಿಂದ ಏನೂ ಫೈನಲ್ಗೆ ಬಂದ ತಂಡವಲ್ಲ. ಸತತ 10 ಒಂದ್ಯ ಗೆದ್ದು ಫೈನಲ್ಗೆ ಬಂದಿತ್ತು. ಆದರೆ, ಬಾರತದ ಈ ಬಲಿಷ್ಠ ತಂಡಕ್ಕೆ ಆಸ್ಟ್ರೇಲಿಯಾದಿಂದ ಮಾತ್ರವೇ ಸೋಲಿಸಲು ಸಾಧ್ಯ ಎಂಬಂತ್ತಿತ್ತು,” ಎಂದಿದ್ದಾರೆ.