ಕಳೆದ ಕೆಲವು ವರ್ಷಗಳಿಂದ ಭಾರತೀಯ ಕಾರು ಖರೀದಿದಾರರ ಅತ್ಯಂತ ಜನಪ್ರಿಯ ಆಯ್ಕೆಗಳಾಗಿವೆ. ಸಣ್ಣ ಮೈಕ್ರೋ ಎಸ್ಯುವಿಗಳೊಂದಿಗೆ ಈ ವಿಭಾಗವು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ
1. ಟಾಟಾ ನೆಕ್ಸಾನ್
ಅಕ್ಟೋಬರ್ ತಿಂಗಳಲ್ಲಿ ಟಾಟಾ ನೆಕ್ಸಾನ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಸ್ಯುವಿಯಾಗಿ ಮೂಡಿಬಂದಿದೆ. ಈ ಅವಧಿಯಲ್ಲಿ ಸ್ವದೇಶಿ ಕಾರು ತಯಾರಕ ಕಂಪನಿ ಟಾಟಾ ಮೋಟಾರ್ಸ್ನ ಈ ಕಾರು 16,887 ಯುನಿಟ್ ಮಾರಾಟವಾಗಿದೆ. ಇದರಲ್ಲಿ ಎಲೆಕ್ಟ್ರಿಕ್ ಕಾರುಗಳೂ ಒಳಗೊಂಡಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಟಾಟಾ ನೆಕ್ಸಾನ್ನ ಮಾರಾಟ ಶೇ. 22.66ರಷ್ಟು ಏರಿಕೆ ಕಂಡಿದೆ.
ಈ ವರ್ಷದ ಸೆಪ್ಟೆಂಬರ್ನಲ್ಲಿ ನೆಕ್ಸಾನ್ ಶ್ರೇಣಿಯ ಪ್ರಮುಖ ಫೇಸ್ಲಿಫ್ಟ್ ಮಾದರಿ ಬಿಡುಗಡೆಯಾಗಿದ್ದು, ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಇದು ಮಾರಾಟ ಹೆಚ್ಚಲು ಪ್ರಮುಖ ಕಾರಣವಾಗಿದೆ.
2. ಮಾರುತಿ ಸುಜುಕಿ ಬ್ರೇಝಾ
ಮಾರುತಿ ಸುಜುಕಿ ಬ್ರೆಝಾ 2016ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದಾಗಿನಿಂದ ಸಬ್ಕಾಂಪ್ಯಾಕ್ಟ್ ಎಸ್ಯುವಿ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಕಾರು ಆಗಿದೆ. ಈವರೆಗೆ ಈ ಕಾರನ್ನು ಎರಡು ಬಾರಿ ಫೇಸ್ಲಿಫ್ಟ್ ಮಾಡಲಾಗಿದೆ. 2020ರಲ್ಲಿ ಮೊದಲ ಬಾರಿಗೆ ಹಾಗೂ 2022ರಲ್ಲಿ ಎರಡನೇ ಬಾರಿಗೆ ಫೇಸ್ಲಿಫ್ಡ್ ಮಾದರಿಯನ್ನು ಬಿಡುಗಡೆ ಮಾಡಲಾಯಿತು. ಇಂಡೋ-ಜಪಾನ್ ಕಾರು ತಯಾರಿಕಾ ಕಂಪನಿಯು ಬ್ರೇಜಾದ 16,050 ಕಾರುಗಳನ್ನು ಅಕ್ಟೋಬರ್ ಅವಧಿಯಲ್ಲಿ ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರಾಟ ಶೇ. 61.45ರಷ್ಟು ಏರಿಕೆ ಕಂಡಿದೆ.
3. ಟಾಟಾ ಪಂಚ್
ಟಾಟಾ ಮೋಟಾರ್ಸ್ 2021ರಲ್ಲಿ ಪಂಚ್ ಅನ್ನು ಬಿಡುಗಡೆ ಮಾಡಿತು. ಇದು ನೆಕ್ಸಾನ್ಗಿಂತ ಕೆಳಗಿನ ಮಾದರಿಯ ಕಾರು ಆಗಿದೆ. ಅಕ್ಟೋಬರ್ನಲ್ಲಿ ಟಾಟಾ ಮೋಟಾರ್ಸ್ ಈ ಮಾದರಿಯ 15,317 ಕಾರುಗಳನ್ನು ಮಾರಾಟ ಮಾಡಿದೆ. ಈ ಮೂಲಕ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರಾಟ ಶೇ. 40ರಷ್ಟು ಏರಿಕೆ ಕಂಡಿದೆ.
4. ಹ್ಯುಂಡೈ ವೆನ್ಯೂ
ಹ್ಯುಂಡೈ ವೆನ್ಯೂ ಸಬ್ಕಾಂಪ್ಯಾಕ್ಟ್ ಎಸ್ಯುವಿ ವಲಯದಲ್ಲಿ 2019ರಲ್ಲಿ ಪಾದಾರ್ಪಣೆ ಮಾಡಿತು. ಅಂದಿನಿಂದ ಇದು ಹೆಚ್ಚಿನ ಮಾರಾಟ ದಾಖಲಿಸುತ್ತಾ ಬಂದಿದೆ. ಕಳೆದ ವರ್ಷದ ಮಧ್ಯದಲ್ಲಿ ಇದರ ಫೇಸ್ಲಿಫ್ಟ್ ಆವೃತ್ತಿಯನ್ನು ಹ್ಯುಂಡೈ ಬಿಡುಗಡೆ ಮಾಡಿತು. ಕೊರಿಯನ್ ಮೂಲದ ಕಾರು ತಯಾರಿಕಾ ಕಂಪನಿಯು ಕಳೆದ ತಿಂಗಳು 11,581 ವೆನ್ಯೂ ಕಾರುಗಳನ್ನು ಮಾರಾಟ ಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 20ರಷ್ಟು ಏರಿಕೆ ಕಂಡಿದೆ.
5. ಮಾರುತಿ ಸುಜುಕಿ ಫ್ರಾಂಕ್ಸ್
ಮಾರುತಿ ಸುಜುಕಿ ಈ ವರ್ಷದ ಮಾರ್ಚ್ನಲ್ಲಿ ಬ್ಯಾಲೆನೊ ಆಧಾರಿತ ತನ್ನ ಎರಡನೇ ಎಸ್ಯುವಿ ಕ್ರಾಸ್ಓವರ್ ಫ್ರಾಂಕ್ಸ್ ಅನ್ನು ಬಿಡುಗಡೆ ಮಾಡಿತು. ಕಳೆದ ತಿಂಗಳು ಈ ಮಾದರಿಯ ಒಟ್ಟು 11,587 ಕಾರುಗಳು ದೇಶಾದ್ಯಂತ ಮಾರಾಟವಾಗಿವೆ.