ವಾಷಿಂಗ್ಟನ್: ತಾವು ಕಟ್ಟಿದ ಕಂಪನಿ ಓಪನ್ಎಐನಿಂದ ಪದಚ್ಯುತಗೊಂಡಿದ್ದ ಸ್ಯಾಮ್ ಆಲ್ಟ್ಮನ್, ಈಗ ಮೈಕ್ರೋಸಾಫ್ಟ್ ಸೇರಿದ್ದಾರೆ. ಕಂಪನಿ ಸಿಇಒ ಸತ್ಯ ನಾಡೆಲ್ಲಾ ಅವರೇ ಸೋಮವಾರ ಈ ಮಾಹಿತಿ ನೀಡಿದ್ದಾರೆ.
ಸ್ಯಾಮ್ ಆಲ್ಟ್ಮನ್ ಜೊತೆಗೆ, ಓಪನ್ಎಐನ ಮಾಜಿ ಅಧ್ಯಕ್ಷ ಗ್ರೆಗ್ ಬಾಕ್ಸ್ಮನ್ ಕೂಡ ಮೈಕ್ರೋಸಾಫ್ಟ್ಗೆ ಸೇರಿದ್ದಾರೆ. ಆಲ್ಟ್ಮನ್ ಅವರು ಮೈಕ್ರೋಸಾಫ್ಟ್ನಲ್ಲಿ ಹೊಸ ಸುಧಾರಿತ ಕೃತಕ ಬುದ್ಧಿಮತ್ತೆ (ಎಐ) ಸಂಶೋಧನಾ ತಂಡವನ್ನು ಮುನ್ನಡೆಸಲಿದ್ದಾರೆ.
ಚಾಟ್ ಜಿಪಿಟಿ ಮೂಲಕ ಜಾಗತಿಕ ಖ್ಯಾತಿ ಗಳಿಸಿದ್ದ ಓಪನ್ಎಐ ಸಹ – ಸಂಸ್ಥಾಪಕ ಆಲ್ಟ್ಮನ್ ಅವರನ್ನು ಸಿಇಒ ಹುದ್ದೆಯಿಂದ ವಜಾಗೊಳಿಸಿದ ಬಳಿಕ, ಮೀರಾ ಮುರಾಟಿ ಅವರಿಗೆ ಮಧ್ಯಂತರ ಅವಧಿಗೆ ಈ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ಮೀರಾ ಅವರನ್ನೂ ಆ ಹುದ್ದೆಯಿಂದ ತೆಗೆದುಹಾಕಲಾಗಿದೆ. ಈ ಕುರಿತು ಸಂಸ್ಥೆಯ ಸಿಬ್ಬಂದಿಗೆ ಭಾನುವಾರ ರಾತ್ರಿ ಕಳಿಸಿದ ಆಂತರಿಕ ಮೆಮೊದಲ್ಲಿ ಹೇಳಲಾಗಿದೆ.