ಬೆಂಗಳೂರು:- ನಾಲ್ಕು ದಿನಗಳ ಕಾಲ ರಾಜಧಾನಿ ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳಕ್ಕೆ ಅದ್ದೂರಿ ತೆರೆ ಬಿದ್ದಿದೆ. ಆರಂಭದ ದಿನಕ್ಕಿಂತ ವಾರಾಂತ್ಯದ ದಿನಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ಮೇಳದ ವಿಶೇಷತೆ ವೀಕ್ಷಿಸಿದರು.
ಉದ್ಘಾಟನಾ ದಿನವಾದ ಶುಕ್ರವಾರ 1.31 ಲಕ್ಷ ಜನರು ಆಗಮಿಸಿದ್ದರೆ, ವಾರಾಂತ್ಯದ ಶನಿವಾರ ಈ ಸಂಖ್ಯೆ ಬರೋಬ್ಬರಿ 5.48 ಲಕ್ಷದಷ್ಟಿತ್ತು. ಭಾನುವಾರವಾದ ಮೂರನೇ ದಿನ ಕ್ರಿಕೆಟ್ ನಡುವೆಯೂ 5.10 ಲಕ್ಷ ಜನರು ಭೇಟಿ ನೀಡಿದ್ದು, ಮೂರು ದಿನದಲ್ಲಿ 11.89 ಲಕ್ಷ ಜನರು ಕೃಷಿ ಮೇಳವನ್ನು ವೀಕ್ಷಿಸಿದ್ದರು. ನಾಲ್ಕನೇ ಹಾಗೂ ಕೊನೆಯ ದಿನ ಅಂದರೆ ಇಂದು 3.78 ಲಕ್ಷ ಜನ ವೀಕ್ಷಕರು ಬಂದು ಕೃಷಿ ಮೇಳ ಆಸ್ಪಾದಿಸಿದ್ದಾರೆ. ಅಲ್ಲದೆ ವಾರಾಂತ್ಯ ದಿನಗಳಾದ ಶನಿವಾರ 1.65 ಲಕ್ಷ ಭಾನುವಾರ 1.45 ಕೋಟಿ ವ್ಯವಹಾರ ನಡೆದಿತ್ತು. ಇದು ಕೃಷಿಮೇಳದ ಅದ್ಧೂರಿ ಯಶಸ್ಸಿಗೆ ನಿದರ್ಶನವಾಗಿದೆ.
ಮೇಳಕ್ಕೆ ಭೇಟಿ ನೀಡಿದವರ ಸಂಖ್ಯೆ 15.67 ಲಕ್ಷ ದಾಟಿದೆ. ಜೊತೆಗೆ, 5.28 ಕೋಟಿ ವ್ಯವಹಾರ ನಡೆದಿದೆ.