ಬೆಂಗಳೂರು:- ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಿಎಂ ಇಬ್ರಾಹಿಂ ಕಿಡಿಕಾರಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಾನು ಇನ್ನೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ. ಹೆಚ್ಡಿ ದೇವೇಗೌಡ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಇರುತ್ತಾರೋ ಇಲ್ಲವೋ ಎಂಬುದೇ ಅನುಮಾನವಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರೇ ರಾಷ್ಟ್ರಾಧ್ಯಕ್ಷರಾಗಿ ಇರ್ತಾರಾ ಇಲ್ಲವೋ ಎಂಬ ಅನುಮಾನವಿದೆ. ಆ ಬಗ್ಗೆ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ನಿರ್ಧಾರ ಆಗಲಿದೆ. ನಿಮ್ಮ ಮಗನಿಗಾಗಿ ಈ ತರ ಮಾಡಿದ್ರೆ ಏನು ಮಾಡ್ತೀರಾ? ಎಂದು ಪ್ರಶ್ನಿಸಿದ್ದಾರೆ. ರಾಷ್ಟ್ರೀಯ ಕಾರ್ಯಕಾರಣಿ ನಿರ್ಧಾರ ಕೈಗೊಂಡರೆ ಏನು ಮಾಡುತ್ತಾರೆ? ಒಬ್ಬ ವ್ಯಕ್ತಿ ತೆಗೆಯುತ್ತಿಲ್ಲ. ರಾಷ್ಟ್ರೀಯ ಕಾರ್ಯಕಾರಣಿ ಸಭೆ ಮಾಡಿ ಸ್ಥಾನದಿಂದ ತೆಗೆದುಹಾಕಿದರೆ ಏನು ಮಾಡುತ್ತೀರಿ? ನಿಮ್ಮ ನಿರ್ಣಯವನ್ನು ವಾಪಸ್ ಪಡೆಯಿರಿ ಎಂದು ಇಬ್ರಾಹಿಂ ಒತ್ತಾಯಿಸಿದ್ದಾರೆ.
ಇನ್ನೂ ನಾನು ಈಗಲೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷನೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಕುಮಾರಸ್ವಾಮಿ ಅವರನ್ನು ರಾಜ್ಯ ಘಟಕದ ಅಧ್ಯಕ್ಷರಾಗಿ ಮಾಡಿದ್ದು ಮೊದಲ ತಪ್ಪು. ಅಮಾನತು ಮಾಡಲು ನನಗೆ ನೋಟಿಸ್ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ದೇವೇಗೌಡರು ಪ್ರಧಾನಿ ಆದವ್ರು,ಪಾರ್ಟಿಯನ್ನು ನಡೆಸಿದ್ದಾರೆ. ಅವರು ತಪ್ಪುಗಳ ಮೇಲೆ ತಪ್ಪು ಮಾಡ್ತಿದ್ದಾರೆ, 2-3 ಮೆಂಬರ್ಸ್ ಸೇರಿ ನನ್ನ ತೆಗೆಯಬೇಕು. ಆದರೆ, ತಪ್ಪು ಮಾಡಿದ್ದಾರೆ. ರಾಷ್ಟ್ರೀಯ ಸಮಿತಿ ಸಭೆ ಕೆರೆದಿದರು. ನಾನು ಕರೆದಿದಲ್ಲ. ಭಾಗಹಿಸಿದ್ದೆನೆ. ದೇವೇಗೌಡರಿಗೆ ಇನ್ನೊಂದು ಚಾನ್ಸ್ ಕೊಡೋಣ ಅಂತ ಚರ್ಚೆಯಾಗಿದೆ, 9 ನೇ ತಾರೀಖಿನೊಳಗೆ ಮೈತ್ರಿ ನಿಲುವು ಬದಲಾಯಿಸಬೇಕು. ಬೆಂಗಳೂರಿನಲ್ಲಿ ಸಭೆ ಮಾಡೋ ಬಗ್ಗೆ ಚರ್ಚೆ ಮಾಡಲಾಗಿದೆ. ನನ್ನನ್ನ ತೆಗೆದಿದ್ದು ತಪ್ಪು.ಕೋರ್ಟಿಗೆ ಹೋಗುತ್ತೆನೆ ಎಂದು ಹೇಳಿದರು.