ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ 2 ಸಿನಿಮಾದ ಬಗ್ಗೆ ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿವೆ. ಸಿನಿಮಾ ಮಹೂರ್ತದ (Muhurta) ಕುರಿತಂತೆ ಪಂಜುರ್ಲಿ (Panjurl) ಮತ್ತು ಗುಳಿಗ ದೈವಕ್ಕೆ ಚಿತ್ರತಂಡ ಮೊರೆ ಹೋಗಿದ್ದು, ದೈವಗಳು ಅಸ್ತು ಎಂದಿವೆ ಎನ್ನುವ ಮಾಹಿತಿ ಸಿಕ್ಕಿದೆ. ಹೀಗಾಗಿ ಸಿನಿಮಾ ತಂಡ ಮುಹೂರ್ತಕ್ಕೆ ಸರ್ವ ಸಿದ್ಧತೆ ಮಾಡಿಕೊಂಡಿದೆ.
ಮತ್ತೊಂದು ಸಮಾಚಾರವೆಂದರೆ, ಈ ಸಿನಿಮಾದಲ್ಲಿ 14ನೇ ಶತಮಾನದಿಂದ ಶುರುವಾಗುವ ಕಥೆ ಕೂಡ ಇರಲಿದೆಯಂತೆ. ಈ ಕುರಿತು ಚಿತ್ರತಂಡ ಮಾಹಿತಿ ನೀಡದೇ ಇದ್ದರೂ, ಗಾಂಧಿ ನಗರದ ಗಲ್ಲಿ ಗಲ್ಲಿಗಳಲ್ಲಿ ಕಾಂತರ ಕಥೆ ಹಾಟ್ ಕೇಕ್ ತರಹ ಮಾರಾಟವಾಗುತ್ತಿದೆ.
‘ಕಾಂತಾರ’ ಸಿನಿಮಾ ವರ್ಲ್ಡ್ ವೈಡ್ ರೀಚ್ ಸಕ್ಸಸ್ಫುಲ್ ಪ್ರದರ್ಶನ ಕಂಡಿತ್ತು. ‘ಕಾಂತಾರ’ ಪಾರ್ಟ್ 2 ಯಾವಾಗ ಎಂದು ಕಾದು ಕುಳಿತ ಫ್ಯಾನ್ಸ್ಗೆ ಸಿಹಿಸುದ್ದಿ ಸಿಕ್ಕಿದೆ. ಇದೇ ನವೆಂಬರ್ಗೆ ಮುಹೂರ್ತ ಫಿಕ್ಸ್ ಆಗಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ, ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ 2’ ಚಿತ್ರದ ಮುಹೂರ್ತ ಇದೇ ನವೆಂಬರ್ 27ರಂದು ಸೋಮವಾರ ಸರಳವಾಗಿ ಜರುಗಲಿದೆ.
ಕಾಂತಾರ (Kantara) ಸೂಪರ್ ಡೂಪರ್ ಹಿಟ್ ಆದಂತೆಯೇ ‘ಕಾಂತಾರ 2’ ಅದಕ್ಕಿಂತ ಹೆಚ್ಚಿನ ಯಶಸ್ಸು ಪಡೆದು ಗೆದ್ದು ಬೀಗಲೇಬೇಕೆಂದು ರಿಷಬ್ ಶೆಟ್ಟಿ ಕೂಡ ತೆರೆಮರೆಯಲ್ಲಿ ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡೆ ಅಖಾಡಕ್ಕೆ ಕಾಲಿಡುತ್ತಿದ್ದಾರೆ.
ಅದಕ್ಕಾಗಿ ತಮ್ಮ ಲುಕ್ ಕೂಡ ಜೇಂಜ್ ಮಾಡಿ, ಸಿನಿಮಾ ಕಥೆಯಲ್ಲಿ ಸಾಕಷ್ಟು ಕೆಲಸ ಮಾಡಿಯೇ ಕಾಂತಾರ 2ಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಕೂಡ ಶುರುವಾಗಲಿದೆ. ಈ ಬಗ್ಗೆ ಹೆಚ್ಚಿನ ಅಪ್ಡೇಟ್ ಸಿನಿಮಾ ಮುಹೂರ್ತ ಸಮಾರಂಭದ ದಿನ ಸಿಗಲಿದೆ.