ಮೈಸೂರು: ಸ್ಪೀಕರ್ ಸ್ಥಾನದ ಬಗ್ಗೆ ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿಚಾರ ಸಂಬಂಧ ಸಚಿವ ಜಮೀರ್ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತೆ ಎಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು. ಇದು ಪ್ರಜಾಪ್ರಭುತ್ವ, ಸಂವಿಧಾನ, ದಲಿತ ವಿರೋಧಿ ಹೇಳಿಕೆ.
ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಕೇಸ್: ತನಿಖೆ ವೇಳೆ ಸ್ಪೋಟಕ ವಿಚಾರ ಬೆಳಕಿಗೆ
ಸಚಿವ ಜಮೀರ್ ತಮ್ಮ ಮನದಾಳದ ಮಾತು ಹೊರಹಾಕಿದ್ದಾರೆ. ನ್ಯಾಯದೇವತೆಯ ಗೌರವಕ್ಕೂ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಬೇರೆ ಸಿಎಂ ಆಗಿದ್ದರೆ ಇಷ್ಟೊತ್ತಿಗೆ ಜಮೀರ್ ರಾಜೀನಾಮೆ ಪಡೆಯುತ್ತಿದ್ರು. ಈ ಸರ್ಕಾರ ಜಮೀರ್ ಹೇಳಿಕೆ ಖಂಡಿಸುವ ಕೆಲಸ ಕೂಡ ಮಾಡಿಲ್ಲ ಎಂದರು.