ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಬಿಜೆಪಿಯ ಮಾಜಿ ಸಚಿವ ಬಿ.ಶ್ರೀರಾಮುಲು ಭೇಟಿ ನೀಡಿದ್ದು ಪುತ್ರಿ ವಿವಾಹ ಕಾರ್ಯಕ್ರಮದ ಆಮಂತ್ರಣ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ.
ನನ್ನ ಮಗಳ ಮದುವೆಯ ಆಮಂತ್ರಣ ಪತ್ರ ಕೊಡಲು ಬಂದಿದ್ದೆ ಡಿಸಿಎಂ ಅವರು ಮದುವೆಗೆ ಬರುವುದಾಗಿ ಹೇಳಿದ್ದಾರೆ ಸಿಎಂ ಅವರನ್ನ ಭೇಟಿ ಮಾಡಿ ಆಮಂತ್ರಣ ಕೊಡುತ್ತೆನೆ ಯಾವುದೇ ರಾಜಕೀಯ ವಿಚಾರ ಚರ್ಚೆ ಆಗಿಲ್ಲ ಇದು ನನ್ನ ವೈಯಕ್ತಿಕ ಭೇಟಿ ಎಂದು ಡಿಕೆಶಿ ಭೇಟಿ ಬಳಿಕ ಮಾಜಿ ಸಚಿವ ರಾಮುಲು ಹೇಳಿಕೆ ನೀಡಿದ್ದಾರೆ.