ಬೆಂಗಳೂರು:- ಬಿಜೆಪಿ ಅಥವಾ ದಳಕ್ಕೆ ವೋಟು ಹಾಕಿದ್ರೆ ಗ್ಯಾರಂಟಿ ಯೋಜನೆಗಳು ರದ್ದಾಗುತ್ತವೆ ಎಂದು ಡಿಸಿಎಂ ಡಿಕೆ ಶಿವಕುಮಾರ ಎಚ್ಚರಿಕೆ ನೀಡಿದರು.
ನಾನು ಡಿಸಿಎಂ ಆದಾಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಈ ವರ್ಷ ಎರಡು ಗ್ಯಾರಂಟಿ ಯೋಜನೆಗಳನ್ನು ತಂದ್ರೆ ಸಾಕು ಅಂದ್ರು. ಆದರೆ ನಾವು ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು. ಹಾಸನಾಂಬೆ ಜಾತ್ರಾ ಸಂಧರ್ಭದಲ್ಲಿ ಹದಿನಾಲ್ಕು ಕೋಟಿ ಆದಾಯ ಬಂದಿದೆ. ಬಸ್ ಫ್ರೀ ಕೊಟ್ಟಿದ್ದರಿಂದಲೇ ಇಷ್ಟೊಂದು ಆದಾಯ ಜಾಸ್ತಿ ಆಗಿದೆ. ಗೃಹ ಲಕ್ಷ್ಮಿ ಯೋಜನೆ ಟೆಕ್ನಿಕಲ್ ಸಮಸ್ಯೆಯಿಂದ ಏಳು ಪರ್ಸೆಂಟ್ ಜನರಿಗೆ ತಲುಪಿಲ್ಲ. ಉಳಿದೆಲ್ಲರಿಗೂ ಯೋಜನೆ ತಲುಪಿದೆ. ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಯುವನಿಧಿ ಕೂಡಾ ಜಾರಿಗೆ ತರ್ತೀವಿ. ಈ ಬಗ್ಗೆ ಜನರಿಗೆ ನೀವೆಲ್ಲ ತಿಳಿಸಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.